No menu items!
13.5 C
Munich
Sunday, April 26, 2026

ಸೆಲ್ಫಿಗಾಗಿಯೇ ಇಡೀ ವಿಶ್ವವನ್ನೇ ಸುತ್ತಿದ..! 3 ವರ್ಷಗಳಲ್ಲಿ 125,000 ಮೈಲು ಸುತ್ತಿದ ಸೆಲ್ಫಿ ಪ್ರೇಮಿ..!

Must read

ಕೆಲವರಿಗೆ ವಿಚಿತ್ರ ವಿಚಿತ್ರ ಹವ್ಯಾಸಗಳಿರುತ್ತವೆ. ಅದು ಅವರ ಜೀವನದ ಒಂದು ಭಾಗವಾಗಿಬಿಟ್ಟಿರುತ್ತವೆ. ಇತ್ತೀಚೆಗಂತೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದೂ ಕೂಡಾ ದೊಡ್ಡ ಹವ್ಯಾಸವಾಗಿ ಮಾರ್ಪಟ್ಟಿದೆ. ಅಲೆಕ್ಸ್ ಚಾಕೋನ್ ಎಂಬ ವ್ಯಕ್ತಿಗೂ ಸೆಲ್ಫಿಯದ್ದೇ ದೊಡ್ಡ ಹುಚ್ಚು. ಅದರಲ್ಲೂ 360 ಡಿಗ್ರೀ ಸೆಲ್ಫಿ ತೆಗೆಸಿಕೊಳ್ಳುವುದು ಅಂದರೆ ಆತನಿಗೆ ಅಚ್ಚುಮೆಚ್ಚು. ಅದೇ ಹುಚ್ಚಿನ ಕಾರಣದಿಂದಾಗಿ ಆತ ಇಡೀ ವಿಶ್ವವನ್ನೇ ಸುತ್ತಿದ್ದಾನೆ..!
ಯೆಸ್.. ಅಲೆಕ್ಸ್ ಚಾಕೋನ್ ಎಂಬ ವ್ಯಕ್ತಿಗೆ 360 ಡಿಗ್ರೀ ಸೆಲ್ಫಿ ತೆಗೆಸಿಕೊಳ್ಳುವ ಹುಚ್ಚು. ಆದ್ದರಿಂದ ಆತ ಇಡೀ ವಿಶ್ವವನ್ನೇ ಸುತ್ತಿದ್ದಾನೆ. ಅದೂ ಕೂಡಾ ಬರೋಬ್ಬರಿ 3 ವರ್ಷಗಳ ಕಾಲ 125,000 ಮೈಲುಗಳನ್ನು ಸುತ್ತಿದ್ದಾನೆ ಎಂದರೆ ಆತನ ಸೆಲ್ಫಿ ಪ್ರೀತಿ ಎಂಥದ್ದು ಎಂದು ಅರಿವಾಗುತ್ತದೆ.
ಅಲೆಕ್ಸ್ ತಾನು ಹೋದ ಕಡೆಯಲ್ಲೆಲ್ಲಾ 360 ಡಿಗ್ರಿಯ ಸೆಲ್ಫಿ ಗಳನ್ನು ತೆಗದುಕೊಳ್ಳುತ್ತಿದ್ದ. ಅದರಲ್ಲೂ ಅದ್ಭುತವಾದ ಪರಿಸರದ ಮಧ್ಯೆ ಆತ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ. ಒಂದು ವೇಳೆ ಆತನಿಗೆ ಯಾವುದಾದರೂ ಒಂದು ಸ್ಥಳ ಇಷ್ಟವಾಯಿತೆಂದರೆ ಅದರ ಮೇಲೆ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದ. ಅದಕ್ಕಾಗಿ ಆತ ಎಂಥದ್ದೇ ರಿಸ್ಕ್ ತೆಗೆದುಕೊಳ್ಳಲು ಕೂಡಾ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅಲೆಕ್ಸ್ ತನ್ನ ಪ್ರವಾಸದ ವೇಲೆ ಹತ್ತಾರು ಸ್ನೇಹಿತರನ್ನು ಮಾಡಿಕೊಂಡ. ಮತ್ತೊಮ್ಮೆ ಪ್ರವಾಸ ಕೈಗೊಂಡಾಗ ಅವರನ್ನು ಭೇಟಿ ಮಾಡುವ ಆಸೆಯನ್ನೂ ಹೊಂದಿದ್ದಾನೆ. ಅಚ್ಚರಿ ಎಂದರೆ ತನ್ನ ಸ್ನೇಹಿತರಿಗೂ ಕೂಡಾ ಸೆಲ್ಫಿ ಹುಚ್ಚು ಹಚ್ಚಿ ಬಂದಿದ್ದಾನೋ ಏನೋ..? ಮುಂದಿನ ದಿನಗಳಲ್ಲಿ ಅವರೂ ಕೂಡಾ ಅಲೆಕ್ಸ್ ನಂತೆ ಸೆಲ್ಫಿಗಾಗಿ ದೇಶಗಳನ್ನು ಸುತ್ತುವ ಕೆಲಸ ಮಾಡುತ್ತಾರೋ ಏನೋ..?

Video : 

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

78 ವರ್ಷದ ಅಜ್ಜಿಯನ್ನು ರಕ್ಷಿಸಿದ 8ರ ಹುಡುಗಿ..! ಕಾಡಿನ ಮಧ್ಯೆ 4.5 ಕಿಮೀ ನಡೆದಿದ್ದಳಂತೆ ಆ ಪುಟ್ಟ ಬಾಲೆ..!

ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!

ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!

ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!

ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !

ಮಾನವನನ್ನು ಹೆಚ್ಚಾಗಿ ಕೊಲ್ಲುತ್ತಿರುವ ಜೀವಿ ಯಾವುದು ಗೊತ್ತಾ..? ವಿಷಪೂರಿತ ಹಾವುಗಳನ್ನು ಮೀರಿಸಿದ ಮಾನವ ಶತ್ರು ಯಾವುದು ಗೊತ್ತಾ..?

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article