ಐಪಿಎಲ್ ಜೋಶ್ ಜೋರಾಗುತ್ತಿದೆ. ನಾಳೆ ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿ ಬಿ ಮತ್ತು ಪಂಜಾಬ್ ತಂಡಗಳ ನಡುವೆ ಪಂದ್ಯ ನಡೆಯಲಿದೆ.
ವಿರಾಟ್ ಪಡೆಯನ್ನು ಬೆಂಬಲಿಸಲು ಪತ್ನಿ ಅನುಷ್ಕಾ ಶರ್ಮಾ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಹಿಂದೆ ಅನುಷ್ಕಾ ಗ್ಯಾಲರಿಯಲ್ಲಿ ಕಾಣಿಸಿಕೊಂಡಾಗ ವಿರಾಟ್ ಕಳಪೆ ಪ್ರದರ್ಶನ ನೀಡಿದ್ದರು. ಆಗ ಅನೇಕರು ಅನುಷ್ಕಾ ಅವರನ್ನು ದೂರಿದ್ದರು. ಆಗ ವಿರಾಟ್ ಪತ್ನಿಯ ಬೆಂಬಲಕ್ಕೆ ನಿಂತಿದ್ದರು. ಅದನ್ನಿಲ್ಲಿ ಸ್ಮರಿಸಬಹುದು.