ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಕ್ರೀಸ್ ಗೇಲ್ ಅಬ್ಬರಕ್ಕೆ ಸನ್ ರೈಸರ್ಸ್ ಹೈದರಾಬಾದ್ ತತ್ತರಿಸಿ ಐಪಿಎಲ್ 11ನೇ ಆವೃತ್ತಿಯಲ್ಲಿ ಮೊದಲ ಸೋಲು ಕಂಡಿತು.
ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕಿಂಗ್ಸ್ ಇಲೆವೆಲ್ ಪಂಜಾಬ್ ಕ್ರೀಸ್ ಗೇಲ್ ಅಜೇಯ ಶತಕ (104) ರನ್ ಗಳ ನೆರವಿನಿಂದ ನಿಗಧಿತ 20 ಓವರ್ ಗಳಲ್ಲಿ 193 ರನ್ ಗಳಿಸಿತು. ಕನ್ನಡಿಗರಾದ ರಾಹುಲ್ 18, ಅಗರವಾಲ್ 18, ಕರುಣ್ ನಾಯರ್ 31ಹಾಗೂ ಆಸೀಸ್ ಆಟಗಾರ ಫಿಂಚ್ ಅಜೇಯ 14 ರನ್ ಕೊಡುಗೆ ನೀಡಿದರು.
ಬೃಹತ್ ಮೊತ್ತ ಬೆನ್ನತ್ತಿದ ಸನ್ ರೈಸರ್ಸ್ ಮನೀಶ್ ಪಾಂಡೆ ಅಜೇಯ 57, ನಾಯಕ ವಿಲಯಮ್ ಸನ್ 54 ರನ್ ಬಾರಿಸಿದರೂ ಗೆಲುವು ಮರೀಚಿಕೆಯಾಯಿತು. ಸತತ ಮೂರು ಪಂದ್ಯ ಗೆದ್ದಿದ್ದ ಹೈದರಾಬಾದ್ 15 ರನ್ ಗಳಿಂದ ಸೋಲನುಭಿಸಿತು.