ಭಾರತ ಕ್ರಿಕೆಟಿಗ, 2011ರ ವಿಶ್ವಕಪ್ ಹೀರೋ…, ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಭಾರತಕ್ಕೆ ವಿಶ್ವಕಪ್ ತಂದುಕೊಡಬೇಕೆಂದು ನೋವು ತುಂಬಿಕೊಂಡು ಆಟವಾಡಿದ ಯುವಿ ನಿವೃತ್ತಿ ಬಗ್ಗೆ ಮಾತಾಡಿದ್ದಾರೆ.
ವಿಶ್ವ ಕ್ರಿಕೆಟ್ ಕಂಡಿರುವ ಅದ್ಭುತ ಕ್ರಿಕೆಟಿಗರ ಸಾಲಲ್ಲಿ ಯುವಿ ಕೂಡ ನಿಲ್ತಾರೆ.
ಯುವಿಯ ಆಲ್ ರೌಂಡ್ ಆಟದ ನೆರವಿನಿಂದ ಭಾರತ 2011ರ ವಿಶ್ವಕಪ್ ಗೆದ್ದಿದ್ದು ಇನ್ನೂ ಹಸಿರಾಗಿಯೇ ಇದೆ. ಯುವರಾಜ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಯುವಿ ದಾಖಲೆಯ ಆಟ ಯಾರಿಗೆ ತಾನೆ ನೆನಪಿಲ್ಲ…?
ಯುವ ಅತ್ಯುತ್ತಮ ಬ್ಯಾಟ್ಸ್ ಮನ್ ಮಾತ್ರವಲ್ಲ, ಅಗತ್ಯವಿದ್ದಾಗ ಬೌಲಿಂಗ್ ಮಾಡಿ ವಿಕೆಟ್ ಕಿತ್ತು ತಂಡಕ್ಕೆ ಅದೆಷ್ಟೋ ಬಾರಿ ನೆರವಾಗಿದ್ದಾರೆ. ಅತ್ಯುತ್ತಮ ಕ್ಷೇತ್ರ ರಕ್ಷಣೆಯ ಮೂಲಕವೂ ಗಮನ ಸೆಳೆದಿದ್ದಾರೆ.
ಪ್ರಸ್ತುತ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ಯುವಿ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಉತ್ತಮ ಆಟ ಆಡುವಲ್ಲಿ ಯುವಿ ವಿಫಲರಾಗಿದ್ದಾರೆ. ಈಗ ಯುವಿ ನಿವೃತ್ತಿ ಬಗ್ಗೆಯೂ ಚರ್ಚೆಯಾಗುತ್ತಿದೆ.
ತಮ್ಮ ನಿವೃತ್ತಿ ಬಗ್ಗೆ ಯುವಿ ಕೂಡ ಮಾತಾಡಿದ್ದಾರೆ. ‘2019ರ ವಿಶ್ವಕಪ್ ವರೆಗೆ ನನ್ನ ವೃತ್ತಿ ಜೀವನ ಮುಂದುವರೆಸಲು ಬಯಸುತ್ತೇನೆ. ಅದಾದ ಬಳಿಕ ನಿವೃತ್ತಿಯಾಗುತ್ತೇನೆ ಎಂದು ಯುವಿ ಹೇಳಿದ್ದಾರೆ.