ಈಗಾಗಲೇ ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದೆ ‘ಬಕಾಸುರ’ ಸಿನಿಮಾ…! ನಾಳೆ ರಿಲೀಸ್ ಆಗಲಿರೋ ಈ ಚಿತ್ರ ಟೈಟಲ್ ಹಾಗೂ ಟ್ರೇಲರ್ ನಿಂದ ಗಮನ ಸೆಳೆಯುತ್ತಿದೆ.
ಕರ್ವ ನಿರ್ದೇಶಕ ನವನೀತ್ ಅದೇ ತಂಡವನ್ನು ಇಟ್ಟುಕೊಂಡು ಬಕಾಸುರನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕರ್ವ ಚಿತ್ರದ ಬಳಿಕ ನವನೀತ್ ಅವರಿಗೆ ‘ಕರ್ವ2 ಮಾಡುವಂತೆ ಕರ್ವ ನಿರ್ಮಾಪಕರಿಂದ ಆಫರ್ ಬಂದಿತ್ತು. ಆದರೆ, ರವಿಚಂದ್ರನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕೆಂಬ ಉದ್ದೇಶದಿಂದ ನವನೀತ್ ಕರ್ವ2 ಗೆ ಸ್ವಲ್ಪ ಬ್ರೇಕ್ ನೀಡಿ, ಬಕಾಸುರ ಸಿನಿಮಾ ಮಾಡಿದ್ದಾರೆ.
ರವಿಚಂದ್ರನ್ ಜತೆ ಸಿನಿಮಾ ಮಾಡಬೇಕೆಂದು ಅವರಿಗೆ ಎರಡು ಕಥೆಗಳನ್ನು ಹೇಳಿದಾಗ ರವಿಚಂದ್ರನ್ ಈ ಕಥೆ ಓಕೆ ಮಾಡಿದರಂತೆ. ಜೊತೆಗೆ ಬಕಾಸುರ ಟೈಟಲ್ ಸಜೆಸ್ಟ್ ಮಾಡಿದ್ದೂ ಅವರೇ ಅಂತೆ…!
ರವಿಚಂದ್ರನ್ ದೊಡ್ಡ ಬ್ಯುಸ್ ನೆಸ್ ಮನ್ ಆಗಿ , ರೋಹಿತ್ ಲಾಯರ್ ಆಗಿ ಕಾಣಿಸಿಕೊಂಡಿದ್ದಾರೆ. ಕಾವ್ಯಗೌಡ ಈ ಚಿತ್ರದ ನಾಯಕಿ. ಈ ಸಿನಿಮಾ ಮೂಲಕ ಅವರು ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ರಘುಭಟ್, ಮಕರಂದ್ ದೇಶ್ ಪಾಂಡೆ, ಶಶಿಕುಮಾರ್, ಸುಚೇಂದ್ರ ಪ್ರಸಾದ್, ಸಾಧುಕೋಕಿಲ ಮತ್ತಿತರರು ಚಿತ್ರದಲ್ಲಿದ್ದಾರೆ. ನಾಳೆ ಸಿನಿಮಾ ತೆರೆಕಾಣಲಿದೆ.