ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿರುವುದು ನಿಮಗೆ ಈಗಾಗಲೇ ಗೊತ್ತಿದೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 8 ರಿಂದ 20ರವರೆಗೆ ಪರೀಕ್ಷೆ ನಡೆಯಲಿದೆ.
ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 14 ಕೊನೆಯ ದಿನ. ಮರು ಮೌಲ್ಯ ಮಾಪನಕ್ಕೆ ಒಂದು ವಿಷಯಕ್ಕೆ 1670 ರೂ ಶುಲ್ಕವಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಕಾಪಿ ಪಡೆಯಲು 530ರೂ ಪಾವತಿಸಬೇಕು. ಸ್ಕ್ಯಾನಿಂಗ್ ಪ್ರತಿ ಬೇಕಾದಲ್ಲಿ ಅದನ್ನು ಪಡೆಯಲು ಮೇ 7 ಕೊನೆಯ ದಿನ.