No menu items!
30.9 C
Munich
Thursday, June 18, 2026

ಎಬಿಡಿ ಅನುಪಸ್ಥಿತಿಯಲ್ಲಿ ಅಭಿಮಾನಿಗಳಿಗೆ ಖುಷಿಕೊಟ್ಟಿದ್ದು ದ್ರಾವಿಡ್….!

Must read

ನಿನ್ನೆ ರಾಯಲ್ ಚಾಲೆಂಜರ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಹಣಾಹಣಿಗೆ ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಿತ್ತು.
ಆರ್ ಸಿ ಬಿ‌ ಗೆದ್ದೇ ಗೆಲ್ಲುತ್ತೆ ಎಂಬ ಆಸೆಯೊಂದಿಗೆ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದರು.
ಟಾಸ್ ಗೆದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿಯನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು.
ಮೊದಲು ಆರ್ ಸಿಬಿ ಬ್ಯಾಟಿಂಗ್… ಸಿಕ್ಸರ್, ಬೌಂಡರಿಗಳ ಸುರಿಮಳೆ ಗ್ಯಾರೆಂಟಿ ಅಂತ ಅಭಿಮಾನಿಗಳು ಕಾದಿದ್ರು. ಆದರೆ ಎ ಬಿ ಡಿವಿಲಿಯರ್ಸ್ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ ಎಂಬ ಸುದ್ದಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು.


ಅನಾರೋಗ್ಯ ಕಾರಣದಿಂದ ಎ ಬಿ ಡಿ ಬರ್ಲಿಲ್ಲ ಎಂದು ಬೇಜಾರಲಿದ್ದ ಅಭಿಮಾನಿಗಳಿಗೆ ದ್ರಾವಿಡ್ ಖುಷಿಕೊಟ್ರು.


ಹೌದು, ನಿನ್ನೆ ನಡೆದ ಪಂದ್ಯದಲ್ಲಿ ಎ ಬಿ ಡಿವಿಲಿಯರ್ಸ್ ಅಲಭ್ಯರಾಗಿದ್ರು. ಇದರಿಂದ ಅಭಿಮಾನಿಗಳಿಗೆ ಬೇಜಾರಿತ್ತು. ಆದರೆ , ಹೆಮ್ಮೆಯ ಕನ್ನಡಿಗ , ವಿಶ್ವಶ್ರೇಷ್ಠ ಕ್ರಿಕೆಟಿಗ, ಭಾರತ ಕಿರಿಯರ ತಂಡದ ಗುರು ರಾಹುಲ್ ದ್ರಾವಿಡ್ ನಿನ್ನೆಯ ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು. ಅವರನ್ನು ‌ಕಂಡ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.‌ದ್ರಾವಿಡ್ ಅವರನ್ನು ನೋಡುತ್ತಿದ್ದಂತೆ ಸಂಭ್ರಮದ ಕೂಗು‌ ಮುಗಿಲುಮುಟ್ಟಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article