ಡಾ. ರಾಜ್ ಕುಮಾರ್ ಅಭಿನಯನದ ಸೂಪರ್ ಹಿಟ್ ಸಿನಿಮಾ ‘ ಎರಡು ಕನಸು ‘ ಸಿನಿಮಾವನ್ನು ಯಾರು ತಾನೆ ನೋಡಿಲ್ಲ ಹೇಳಿ? ಈ ಸಿನಿಮಾದ ‘ಎಂದೆಂದು ನಿನ್ನನು ಮರೆತು ‘ ಎಂಬ ಹಾಡನ್ನು ಆ ಪೀಳಿಗೆಯೂ ಗುನುಗುತ್ತಿತ್ತು, ನಾವೂ ಗುನುಗುತ್ತಿರ್ತೀವಿ.
ಡಾ. ರಾಜ್ ಈ ಸಿನಿಮಾದಲ್ಲಿ ಚೇತಕ್ ಸ್ಕೂಟರ್ ಏರಿ ರಾಜ್ ಪೋಸ್ ಕೊಟ್ಟಿದ್ದರು.
ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಹ ಅಪ್ಪನ ಹಾಗೆ ಪೋಸ್ ಕೊಟ್ಟಿದ್ದಾರೆ. ನಟ ಸಾರ್ವಭೌಮ ಸಿನಿಮಾದಲ್ಲಿ ಅಪ್ಪು ಚೇತಕ್ ಸ್ಕೂಟರ್ ಏರಿ ನಿಮ್ಮಮುಂದೆ ಬರಲಿದ್ದಾರೆ.
ತಂದೆ ರಾಜ್ ಕುಮಾರ್ ಅವರಂತೆ ಪುನೀತ್ ಚೇತಕ್ ಸ್ಕೂಟರ್ ಹತ್ತಿ ಪೋಸ್ ಕೊಟ್ಟಿದ್ದಾರೆ. ಈ ಸಿನಿಮಾಕ್ಕಾಗಿ ಅಪ್ಪು ಮಾಡಿಸಿಕೊಂಡಿರೋ ಹೇರ್ ಸ್ಟೈಲ್ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದೆ. ಸಿನಿಮಾ ನಿರೀಕ್ಷೆಯೂ ಹೆಚ್ಚಿದೆ.