ಉಳಿದವರು ಕಂಡಂತೆ ಮತ್ತು ಕಿರಿಕ್ ಪಾರ್ಟಿ ಸಿನಿಮಾದ ಜೋಡಿ ರಿಷಭ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಮತ್ತೊಂದು ಸಿನಿಮಾಕ್ಕಾಗಿ ಜೊತೆಗೂಡಿದ್ದಾರೆ.
ರಕ್ಷಿತ್ ಶೆಟ್ಟಿ ಸದ್ಯ ‘ಅವನೇ ಶ್ರೀಮನ್ನಾರಾಯಣ’, ‘ಚಾರ್ಲಿ’ ಸಿನಿಮಾಗಳಲ್ಲಿ ಬಿಝಿ ಇದ್ದಾರೆ.
ರಿಚಭ್ ಉಳಿದವರು ಕಂಡಂತೆ ಸಿನಿಮಾದಲ್ಲಿ ರಕ್ಷಿತ್ ನಿಭಾಯಿಸಿದ್ದ ರಿಚ್ಚಿ ಪಾತ್ರವನ್ನು ಪ್ರಮುಖವಾಗಿಟ್ಟುಕೊಂಡು ಸ್ಕ್ರಿಪ್ಟ್ ಮಾಡ್ತಿದ್ದಾರೆ. ಇದರಲ್ಲಿ ರಕ್ಷಿತ್ ನಾಯಕರಾಗಿರುತ್ತಾರೆ. ಹೀಗೆ ರಕ್ಷಿತ್, ರಿಷಭ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರ್ತಿದೆ. ಈಗಷ್ಟೇ ಪ್ಲಾನ್ ಮಾಡಿಕೊಂಡು ರಿಷಭ್ ಸ್ಕ್ರಿಪ್ಟ್ ಬರೆಯುತ್ತಿರುವುದರಿಂದ ಟೈಟಲ್ ಇನ್ನೂ ಇಟ್ಟಿಲ್ವಂತೆ. ಜೊತೆಗೆ ನಂತರವೇ ಉಳಿದ ಪಾತ್ರಗಳ ಆಯ್ಕೆ ನಡೆಯುತ್ತದೆ.