ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ಪ್ರಜ್ವಲ್ ದೇವರಾಜ್ ಅವರಿಗೆ ಚೌಕ ಸಿನಿಮಾ ಒಂದೊಳ್ಳೆ ಬ್ರೇಕ್ ಕೊಟ್ಟಿತ್ತು. ಬಳಿಕ ಪ್ರಜ್ವಲ್ ಸಿನಿಮಾಗಳ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಿದ್ದಾರೆ.
ಇದೀಗ ಲಕ್ಕಿ ಶಂಕರ್ ನಿರ್ದೇಶನದ ‘ಅರ್ಜುನ್ ಗೌಡ’ ಸಿನಿಮಾದಲ್ಲಿ ಪ್ರಜ್ವಲ್ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಆ್ಯಕ್ಷನ್ ಮತ್ತು ಲವ್ ಸ್ಟೋರಿ ಯನ್ನು ಬೆರೆಸಿರುವ ಚಿತ್ರವಂತೆ. ಪ್ರಜ್ವಲ್ ಕರಿಯರ್ ನಲ್ಲಿ ಇದು ಅತಿ ದೊಡ್ಡ ಬಜೆಟ್ ನ ಮೂವಿ.
ಕಲಾಸಿಪಾಳ್ಯ, ಲಾಕಪ್ ಡೆತ್, ಶಕ್ತಿ ಮೊದಲಾದ ಆ್ಯಕ್ಷನ್ ಸಿನಿಮಾಗಳ ಸಾಲಿಗೆ ಈ ಚಿತ್ರ ಸೇರಿಕೊಳ್ಳುತ್ತೆ ಎನ್ನುತ್ತಾರೆ ನಿರ್ದೇಶಕ ಲಕ್ಕಿ ಶಂಕರ್.