ಈತನ ಹೆಸರು ಮನ್ ಪ್ರೀತ್ ಸಿಂಗ್. ಪಂಜಾಬ್ ನ ಸಣ್ಣ ಗ್ರಾಮದಲ್ಲಿ ಜನಿಸಿದ ಈತನಿಗೆ ಈಗ 23 ವರ್ಷ…ಆದರೆ ಇರೋದು ಬರೀ 5 ಕೆಜಿ ಮಾತ್ರ…!
ಚಿಕ್ಕವನಂತೆ ಕಾಣುವ ಈತನ ಬೆಳವಣಿಗೆ ನಿಂತಿದೆ. ಜನ ತುಂಬಾ ಪ್ರೀತಿಯಿಂದ ನೋಡಿಕೊಳ್ತಾರೆ. ದೇವರ ಅವತಾರ ಎಂದು ಭಾವಿಸಿರುವ ಜನ ಪಿಂಟ್ ಮನುಷ್ಯ ಎನ್ನುತ್ತಾರೆ.
ಕೇವಲ 5ಕೆಜಿ , 60 ಸೆ.ಮೀ ಇರುವ ಮನ್ ಪ್ರೀತ್ ಸಿಂಗನ ನಗುಮುಖ ಹಾಗೂ ಮುಗ್ಧತೆ ಎಲ್ಲರಿಗೂ ಇಷ್ಟ. ಈತ ಜನರನ್ನು ತಮಾಷೆ ಮಾಡಿ ನಗಿಸುತ್ತಿರುತ್ತಾನೆ. ಆದರೆ ಹೆಚ್ಚು ಮಾತಾಡೋದು ಕಷ್ಟ. ಅಮ್ಮ ,ಮಾಮಾ ಇತ್ಯಾದಿ ಸಣ್ಣ ಪುಟ್ಟ ಪದಗಳು ಮಾತ್ರ ಮಾತಾಡೋಕೆ ಬರೋದು.
ಹುಟ್ಟುವಾಗ ಮನ್ ಪ್ರೀತ್ ಆರಾಮಾಗಿಯೇ ಇದ್ದ. ಆದರೆ, ಒಂದು ವರ್ಷದ ಬಳಿಕ ಬೆಳವಣಿಗೆ ಕುಂಠಿತವಾಗಿದೆ.
ಜನ ದೇವರೆಂದು ಆರಾಧಿಸುತ್ತಾರೆ.
ಈತ ಲಾರೂನ್ ಸಿಂಡ್ರೋಮ್ ನಿಂದ ಬಳಲುತ್ತಿದ್ದಾನೆ. ಇದು ತುಂಬಾ ಅಪರೂಪದ ಕಾಯಿಲೆ ಎಂದು ವೈದ್ಯರು ಹೇಳುತ್ತಾರೆ.
ಆರಂಭಿಕ ಹಂತದಲ್ಲಿ ಚಿಕಿತ್ಸೆ ಕೊಡಿಸಲು ಕುಟುಂಬಕ್ಕೆ ಸಾಧ್ಯವಿರಲಿಲ್ಲ. ಈಗ ಇಡೀ ಕುಟುಂಬ ಮನ್ ಪ್ರೀತ್ ಭವಿಷ್ಯದ ಬಗ್ಗೆ ಚಿಂತೆ ಮಾಡ್ತಿದೆ.