ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸ ಬೇಕೆಂದುಕೊಂಡಿರುವ ಪೋಷಕರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.
ಖಾಸಗಿ ಶಾಲೆಗಳ ಶಿಕ್ಷಣ ದಂಧೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಇದೇ ಶೈಕ್ಷಣಿಕ ಸಾಲಿನಿಂದ (2018-19) ಈ ನಿಯಮ ಜಾರಿಗೆ ಬರಲಿದೆ. ನೀತಿ ಸಂಹಿತೆ ಮುಕ್ತಾಯವಾಗುತ್ತಿದ್ದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಆದೇಶ ಹೊರಡಿಸಲಿದ್ದಾರೆ.
ನಾಳೆ (ಮೇ 15 ) ಎಲೆಕ್ಷನ್ ರಿಸೆಲ್ಟ್ ಬರಲಿದ್ದು ಆ ಬಳಿಕ ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ಹಾಗೂ ವಾರ್ಷಿಕ ಶುಲ್ಕ ಕ್ಕೆ ಕಡಿವಾಣ ಹಾಕುವ ಆದೇಶವನ್ನು ಶಾಲಿನಿ ರಜನೀಶ್ ನೀಡಲಿದ್ದಾರೆ.