No menu items!
19.4 C
Munich
Saturday, May 2, 2026

ಪಿಂಚಣಿ ಅರ್ಜಿಗೆ ಸೆಲ್ಫಿ ಫೋಟೋ ನಡೆಯಲ್ಲ

Must read

ಪಿಂಚಣಿ ಅರ್ಜಿಗೆ ಸೆಲ್ಫಿ ಫೋಟೋ ನಡೆಯುವುದಿಲ್ಲ. ‘ಇದು ಪಿಂಚಣಿ ಅರ್ಜಿ .ದಯವಿಟ್ಟು ಸೆಲ್ಫಿ ಫೋಟೋ ಅಂಟಿಸಬೇಡಿ ಎಂದು ಸಿಬ್ಬಂದಿ ಸಚಿವಾಲಯವು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಸೂಚನೆ ನೀಡಿದೆ.
ಬಹುತೇಕ ಪಿಂಚಣಿದಾರರು ಪಿಂಚಣಿ ಅರ್ಜಿಗೆ ಸೆಲ್ಫಿ ಫೋಟೋಗಳನ್ನು ಅಂಟಿಸುತ್ತಿರುವುದರಿಂದ ಸಿಬ್ಬಂದಿ , ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯವು ಭಾವಚಿತ್ರಕ್ಕೆ ಸಂಬಂಧಿಸಿ ಕೆಲವು ನಿರ್ಧಿಷ್ಟ ಸೂಚನೆಗಳನ್ನು ನೀಡಿದೆ.


ಕಪ್ಪು-ಬಿಳುಪು ಭಾವಚಿತ್ರ ಸ್ವೀಕರಿಸಲಾಗುವುದಿಲ್ಲ. ನಿಗದಿತ ಜಾಗಕ್ಕಿಂತ ಸಣ್ಣ ಚಿತ್ರ ಹಾಕಬಾರದು, ಬಣ್ಣದ ಇಲ್ಲವೇ ಕಪ್ಪು ಕನ್ನಡಕ ಧರಿಸಬಾರದು, ತಲೆಕೂದಲು ಕಣ್ಣನ್ನು ಮುಚ್ಚಿಬಾರದು, ಸೆಲ್ಫಿ ಭಾವಚಿತ್ರಗಳಿಗೆ ಅವಕಾಶವಿಲ್ಲ, ತಲೆಯನ್ನು ಮೇಲೆ ಅಥವಾ ಕೆಳಗೆ ಬಾಗಿದ ಬಾರದು, ಭಾವಚಿತ್ರದಲ್ಲಿ ಸಹಿ ಹಾಕಿರಬಾರದು, ಸಮವಸ್ತ್ರದಲ್ಲಿರುವ , ಗಾಢ ಹಿನ್ನೆಲೆ ಹೊಂದಿರುವ ಚಿತ್ರಗಳು ಬೇಡ ಎಂದು ಸೂಚಿಸಿದೆ.
ದೇಶದಲ್ಲಿ 48.61 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದು, 61.17ಲಕ್ಷ ಪಿಂಚಣಿದಾರರಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article