ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗರ ಸಂಖ್ಯೆ ಹೆಚ್ಚಿದೆ. ಇದೀಗ ಈ ಟ್ರೋಲ್ ಗಳಿಗೆ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಸರದಿ.
ಇಷ್ಟು ದಿನ ಸೋಶಿಯಲ್ ಮೀಡಿಯಾದಿಂದ ದೂರವಿದ್ದ ಐಶ್ವರ್ಯ ಇತ್ತೀಚೆಗೆ ಇನ್ಸ್ ಸ್ಟಾಗ್ರಾಂ ಖಾತೆ ತೆರೆದಿದ್ದರು. ಖಾತೆ ತೆರೆದ ಎರಡೇ ದಿನಕ್ಕೆ ಲಕ್ಷಾಂತರ ಫಾಲಫವರ್ಸ್ ಹೊಂದಿರುವ ಐಶ್ವರ್ಯ ರೈ ಅವರು ಮಗಳ ತುಟಿಗೆ ಮುತ್ತು ಕೊಡುವ ಫೋಟೋವನ್ನು ಅಪ್ ಲೋಡ್ ಮಾಡಿರುವುದು ಟ್ರೋಲ್ ಆಗಲು ಕಾರಣವಾಗಿದೆ.
ಮಕ್ಕಳಿಗೆ ತಂದೆ-ತಾಯಂದಿರು ಪಾಶ್ಚಿಮಾತ್ಯ ಸಂಸ್ಕೃತಿಯಂತೆ ತುಟಿಗೆ ಏಕೆ ಮುತ್ತು ಕೊಡ್ತಾರೋ, ಅರ್ಥ ಆಗಲ್ಲ. ಇದನ್ನು ಹಲವು ಸೆಲಬ್ರಿಟಿಗಳು ಮಾಡ್ತಾರೆ. ಇದೊಂದು ಕೆಟ್ಟ ಸಂಪ್ರದಾಯ.ಇದೆಲ್ಲಾ ಬೇಕಿತ್ತ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.