ಹಿಂದೂ ಫೈರ್ ಬ್ರ್ಯಾಂಡ್ ತೇಜಸ್ವಿ ಸೂರ್ಯ ಅವರಿಗೆ ಜಯನಗರ ಬಿಜೆಪಿ ಟಿಕೆಟ್!!??

Date:

 

ಹೌದು! ಹಿಂದೂ ಫೈರ್ ಬ್ರ್ಯಾಂಡ್, ಯುವಕರ ಕಣ್ಮನಿ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರಿಗೆ ಜಯನಗರ ಟಿಕೆಟ್ ಕೊಡಬೇಕು ಎಂದು ಸೋಷಿಯಲ್ ಮಿಡಿಯಾದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ.

ಕೇವಲ 27 ವರ್ಷದ ಈ ತೇಜಸ್ವಿ ಸೂರ್ಯ ಅವರು ವೃತ್ತಿಯಲ್ಲಿ ವಕೀಲರು, ಅತ್ಯದ್ಭುತ ವಾಕ್ ಚತುರರು, ತಮ್ಮ ಪ್ರಖರ ಹಿಂದೂತ್ವದಿಂದಲೇ ರಾಜ್ಯದ ಯುವಜನತೆಯ ಮನದಲ್ಲಿ ಅಚ್ಚಳಿಯದೆ ಉಳಿದ ಹೆಮ್ಮೆಯ ಯುವ ನಾಯಕ. ಮೇ 4ರಂದು ಅಕಾಲಿಕ ಮರಣ ಹೊಂದಿದ ಜಯನಗರದ ಬಿಜೆಪಿ ಅಭ್ಯರ್ಥಿ ವಿಜಯಕುಮಾರ ಅವರ ಸ್ಥಾನವನ್ನು ತುಂಬುವ ಸೂಕ್ತ ವ್ಯಕ್ತಿ ತೇಜಸ್ವಿ ಸೂರ್ಯ ಆಗಿದ್ದಾರೆ ಎಂದು ಕ್ಷೇತ್ರದ ಜನತೆ ಮಾತನಾಡುತ್ತಿದ್ದಾರೆ.

ಜಯನಗರದಲ್ಲಿ ಬ್ರಾಹ್ಮಣ ಸಮುದಾಯದ ಮತಗಳು ಜಾಸ್ತಿ ಇರುವ ಕಾರಣ ಮತ್ತು ಮರಣ ಹೊಂದಿದ ಬಿಜೆಪಿ ಸರಳ ಸಜ್ಜನಿಕೆಯ ವಿಜಯಕುಮಾರ್ ಅವರು ಬ್ರಾಹ್ಮಣ ಸಮುದಾಯದಿಂದ ಬಂದವರಾಗಿದ್ದು ಅವರ ಸ್ಥಾನಕ್ಕೆ ಇವರೇ ಸೂಕ್ತ ವ್ಯಕ್ತಿಯಾಗಿದ್ದು ಅವರನ್ನೇ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಬೇಕು ಅಂತ ಚರ್ಚೆ ನಡೆಯುತ್ತಿದೆ.

ಸದ್ಯ ಜಯನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮಲಿಂಗಾರೆಡ್ಡಿ ಅವರ ಮಗಳು, ಬೆಂಗಳೂರು ಯುತ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸೌಮ್ಯ ರೆಡ್ಡಿ ಅವರ ಹೆಸರು ಅಂತಿಮವಾಗಿದೆ. ಅದೇ ಜಯನಗರದ ಟಿಕೆಟ್ ಅನ್ನು ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರಿಗೆ ಕೊಟ್ಟರೆ ಯುವ ರಾಜಕಾರಣಿಗಳು ಅಖಾಡಕ್ಕೆ ದುಮುಕಿ ರಾಜಕೀಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಬಹುದು.

ಆದರೆ, ಟಿಕೆಟ್ ಸಿಗುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ನಿಜ. ಸದ್ಯ ಜಯನಗರ ಕ್ಷೇತ್ರಕ್ಕೆ ನಟಿ ತಾರಾ, ಎನ್. ಆರ್. ರಮೇಶ, ಎಸ್. ಕೆ ನಟರಾಜ್, ರಾಮಮೂರ್ತಿ ಯವರು ಸಹ ಟಿಕೆಟ್ ಗಾಗಿ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ಸದ್ಯದಲ್ಲಿ ಉಳಿದವರಿಗಿಂತ ತೇಜಸ್ವಿ ಸೂರ್ಯ ಅವರಿಗೆ ರಾಜ್ಯಾದ್ಯಂತ ಇರುವ ಜನಬೆಂಬಲವಾಗಲಿ, ಶಾಸಕರಾಗುವ ಚರಿಸ್ಮಾ, ಹಾಗೂ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವ ಸಾಮರ್ಥ್ಯ ತೇಜಸ್ವಿ ಸೂರ್ಯಾ ಅವರಿಗೆ ಹೆಚ್ಚಿದೆ. ಆದ್ದರಿಂದ ಸಂಘಪರಿವಾದವರ ನಾಯಕರೂ ಸಹ ತೇಜಸ್ವಿ ಸೂರ್ಯರವರಿಗೆ ಟಿಕೆಟ್ ನೀಡಬೇಕೆಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ವಿಶೇಷವೇಂದರೆ ನಮ್ಮ‌ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಹೊಗಳಿಕೆಗೆ ತೇಜಸ್ವಿ ಸೂರ್ಯ ಅವರು ಇತ್ತಿಚಿಗಷ್ಟೆ ಪಾತ್ರರಾಗಿದ್ದರು. ಚುನಾವಣೆಗೂ ಮುನ್ನ ನಡೆದ ಯುವ ಮೋರ್ಚಾ ಕಾರ್ಯಕರ್ತರ ಸಂವಾದಲ್ಲಿ ನರೇಂದ್ರ ಮೋದಿಯವರು ತೇಜಸ್ವಿ ಸೂರ್ಯ ಅವರಿಗೆ ” ಆಪ್ ಸ್ವಯಂ ಸೂರ್ಯ ಹೈ, ಸ್ವಯಂ ತೇಜಸ್ವಿ ಬಿ ಹೈ” ಅಂತ ಹೇಳಿದ್ದು ಇಲ್ಲಿ ಸ್ಮರಿಸಬಹುದು.

ಸದ್ಯದ ಮಾಹಿತಿ ಪ್ರಕಾರ ಹಿಂದೂ ಫೈರ್ ಬ್ರ್ಯಾಂಡ್ ತೇಜಸ್ವಿ ಸೂರ್ಯ ಅವರಿಗೆ ಜಯನಗರ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದ್ದು ಅಧಿಕೃತ ಘೋಷಣೆ ಒಂದೇ ಬಾಕಿ ಇದೆ ಎನ್ನಲಾಗುತ್ತಿದೆ.

 

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...