ಚಿದಾನಂದ್ ಮತ್ತು ಶಾಲಿನಿ ಅಭಿನಯದ ಪಾಪ ಪಾಂಡು ಸೀರಿಯಲ್ ಈಗ ಮತ್ತೆ ಮನೆ ಮನೆಗೆ ಬರಲಿದೆ…!
ಹದಿನೈದು ವರ್ಷಗಳ ಹಿಂದೆ ಕನ್ನಡಿಗರ ಮನಗೆದ್ದಿದ್ದ ಈ ಧಾರವಾಹಿ ಮರಳಿ ತೆರೆಗೆ ಬರುತ್ತಿದ್ದು, ಪಾಪಾಪಾಂಡು ಸೀಸನ್ 2 ಎನ್ನಬಹುದು.
ಸಿಹಿಕಹಿ ಚಂದ್ರು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು.ಈಗ ಬರಲಿರುವ ಸೀಸನ್ 2ನಲ್ಲಿ 15 ವರ್ಷಗಳ ಬಳಿಕ ಧಾರವಾಹಿ ಏನಾಗುತ್ತದೆ ಎನ್ನುವುದೇ ಪ್ರಮುಖ ವಿಷಯವಂತೆ.
ಹಿಂದೆ ಈ ಧಾರಾವಾಹಿಯಲ್ಲಿ ನಟಿಸಿದ್ದ ಕಲಾವಿದರು ಈಗ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದ್ದರಿಂದ ಈ ಬಾರಿ ಯಾರೆಲ್ಲಾ ಕಾಣಿಸಿಕೊಂಡು ನಗಿಸುತ್ತಾರೆ ಎಂಬ ಕುತೂಹಲ ಮನೆಮಾಡಿದೆ.