ತಾನು ಕಲ್ಕಿ ಅವತಾರವೆಂದು ರಾಜ್ಯ ಸರ್ಕಾರಿ ನೌಕರನೊಬ್ಬ ಹೇಳಿಕೊಂಡಿದ್ದಾನೆ…! ವಿಷ್ಣುವಿನ ಹತ್ತನೇ ಅವತಾರವಾದ ನಾನು ಜಗತ್ತಿನ ಆತ್ಮಸಾಕ್ಷಿಯ ಬದಲಾವಣೆಯ ತಪಸ್ಸಿಗಾಗಿ ಕೂರಬೇಕಿದ್ದು, ನನಗೆ ಕಚೇರಿಗೆ ಬರುವುದಕ್ಕೆ ಆಗುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.
ಈತ ಸರ್ಧಾರ್ ಸರೋವರ್ ಸರೋವರ್ ಸರೋವರದ ಪುನವರ್ಸತಿ ಏಜೆನ್ಸಿಯಲ್ಲಿ ಸೂಪರಿಡೆಂಟ್ ಇಂಜಿನಿಯರ್ ರಮೇಶ್ ಚಂದ್ರ ಫೆಫರ್.
ನಾನು ಕಲ್ಕಿ ಅವತಾರ. ಈಗ ನನ್ನನ್ನು ನಂಬದೇ ಹೋದರೆ ಮುಂಬರುವ ದಿನಗಳಲ್ಲಿ ನಾನು ಅದನ್ನು ಸಾಬೀತುಪಡಿಸ್ತೀನಿ ಎಂದು ಸವಾಲಾಕಿದ್ದೇನೆ.
ಈತನಿಗೆ ತಾನು ಕಲ್ಕಿ ಅವತಾರ ಎಂದು 2010ರ ಮಾರ್ಚ್ ನಲ್ಲಿ ಜ್ಞಾನೋದಯ ಆಗಿದ್ದಂತೆ. ಒಮ್ಮೆ ಆಫೀಸಲ್ಲಿರುವಾಗ ತಾನು ಕಲ್ಕಿಯ ಅವತಾರ ಎಂದು ಗೊತ್ತಾಯ್ತಾತಂತೆ. ಅವತ್ತಿಂದ ಈತನಲ್ಲಿ ದೈವಿಕ ಶಕ್ತಿ ಕಾಣುತ್ತಿದೆಯಂತೆ.
ಆಫೀಸಿಗೆ ಯಾಕೆ ಬರುತ್ತಿಲ್ಲ ಎಂದು ನೋಟಿಸ್ ಕೊಟ್ಟಾಗ, ‘ ನಾನು ಮನೆಯಲ್ಲಿ ಕುಳಿತು ಐದು ಆಯಾಮಗಳಿಂದ ತಪಸ್ಸು ಮಾಡುತ್ತಿದ್ದೇನೆ. ಹೀಗಾಗಿ ಕಚೇರಿಗೆ ಬರಲು ಆಗುತ್ತಿಲ್ಲ ಎಂದು ಉತ್ತರ ನೀಡಿದ್ದಾನೆ…!
ಇವನ ನಿರಂತರ ತಪಸ್ಸಿನ ಕಾರಣದಿಂದ 19 ವರ್ಷದ ಈಚೆಗೆ ಈ ಬಾರಿ ಹೆಚ್ಚು ಮಳೆಯಾಗಿದೆಯಂತೆ…! ಇದಕ್ಕಾಗಿ ಅವಿರತ ಪ್ರಾರ್ಥನೆ ಮಾಡಿದ್ದಾನಂತೆ…!