34 ವರ್ಷಗಳ ಬಳಿಕ ಹಿರಿಯ ನಟಿಯೊಬ್ಬರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.
ಹಿರಿಯ ನಟಿ, ಪಂಚಭಾಷಾ ತಾರೆ ಬಿ. ಸರೋಜಾದೇವಿ ಅವರು ನಟ ಸಾರ್ವಭೌಮ ಸೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ… ಅಪ್ಪು ಬಾಲನಟನಾಗಿರುವಾಗ ‘ಯಾರಿವನು’ ಸಿನಿಮಾದಲ್ಲಿ ಈ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ 34 ವರ್ಷದ ಬಳಿಕ ‘ನಟ ಸಾರ್ವಭೌಮ’ ಸಿನಿಮಾದಲ್ಲಿ ಸರೋಜಾದೇವಿ ಅಪ್ಪು ಜೊತೆ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಪುನೀತ್ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸರೋಜಾದೇವಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಸಿಕ್ಕಾಗ ಪತ್ರಕರ್ತ ಪುನೀತ್ ಸರೋಜದೇವಿ ಅವರನ್ನು ಸಂದರ್ಶನ ಮಾಡಲು ಬರುವ ಸನ್ನಿವೇಶವಿದ್ದು, ಇದರ ಚಿತ್ರೀಕರಣ ನಡೆಯುತ್ತಿದೆ.