ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್ ‘ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಎಂಬುದು ಗೊತ್ತಿಲ್ಲ. ಚಿತ್ರೀಕರಣ ಮುಗಿದಿದ್ದರೂ ಸಿನಿಮಾದ ಬಗ್ಗೆ ಸುದ್ದಿಯಿಲ್ಲ.

ನಿರ್ದೇಶಕ ಪ್ರೇಮ್ ಯಾವ ವಿಷಯವನ್ನೂ ಬಿಟ್ಟುಕೊಟ್ಟಿಲ್ಲ. ಟೀಸರ್, ಟ್ರೇಲರ್ ಕೂಡ ಬಿಡುಗಡೆ ಮಾಡಿಲ್ಲ. ದಿ ವಿಲನ್ ನಲ್ಲಿ ಹೀರೋ ಯಾರು? ವಿಲನ್ ಯಾರು? ಎಂಬ ಮಾಹಿತಿಯೂ ಇಲ್ಲ. ಇದೀಗ ಸುದೀಪ್ ಮತ್ತು ಶಿವಣ್ಣ ಅವರ ಲುಕ್ ಬಿಡುಗಡೆಯಾಗಿದೆ.

ಶಿವರಾಜ್ ಕುಮಾರ್ ನಡೆಸಿಕೊಡುತ್ತಿರುವ ‘ನಂ1 ಯಾರಿ ‘ ಕಾರ್ಯಕ್ರಮದಲ್ಲಿ ಸುದೀಪ್ ಜೊತೆ ಪಾಲ್ಗೊಂಡಿದ್ದ ಪ್ರೇಮ್ ದಿ ವಿಲನ್ ನ ಸುದೀಪ್ ಮತ್ತು ಶಿವಣ್ಣ ಅವರ ಲುಕ್ ಬಿಡುಗಡೆ ಮಾಡಿದ್ದಾರೆ.







