ಬ್ರೆಜಿಲ್ ನ ಫುಟ್ಬಾಲ್ ಲೆಜೆಂಡ್ ರೊನಾಲ್ಡಿನೋ ಇಬ್ಬರು ಹೆಂಡಿರ ಮುದ್ದಿನ ಗಂಡ ಆಗಲಿದ್ದಾರೆ….ಇಬ್ಬರು ಯುವತಿಯರನ್ನು ಏಕಕಾಲದಲ್ಲಿ ಮದುವೆ ಆಗೋಕೆ ರೊನಾಲ್ಡಿನೋ ಮುಂದಾಗಿದ್ದಾರೆ.
ಡಿಸೆಂಬರ್ ನಿಂದ ಇಬ್ಬರೂ ಯುವತಿಯೊಡನೆ ವಾಸವಿರುವ ರೊನಾಲ್ಡಿನೋ ರಿಯೋದಲ್ಲಿರುವ ತಮ್ಮ ನಿವಾಸದಲ್ಲೇ ಮದುವೆ ಆಗಲಿದ್ದಾರಂತೆ.
2016 ರಿಂದ ಬ್ರೀಟ್ರಿಜ್ ಅವರೊಟ್ಟಿಗೆ ಡೇಟಿಂಗ್ ಮಾಡ್ತಿರೋ ರೊನಾಲ್ಡಿನೋ ,ತಮ್ಮ ಹಳೆಯ ಗರ್ಲ್ ಫ್ರೆಂಡ್ ಆಗಿರುವ ಪ್ರಿಸ್ಕಿಲಾ ಅವರೊಟ್ಟಿಗೂ ಸಂಬಂಧ ಮುಂದುವರೆಸಿದ್ದಾರೆ. ಈ ಇಬ್ಬರನ್ನೂ ಸಮಾನಾಗಿ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಇವರಿಬ್ಬರೂ ಸಹ ಹೊಂದಿಕೊಂಡಿದ್ದಾರಂತೆ.