No menu items!
11.9 C
Munich
Thursday, April 30, 2026

ಫೇಸ್ ಬುಕ್ ಸ್ನೇಹ ಕೊಲೆಯಲ್ಲಿ ಕೊನೆ…!

Must read

ಫೇಸ್ ಬುಕ್ ನಲ್ಲಾದ ಸ್ನೇಹ ಕೊಲೆಯಲ್ಲಿ ಕೊನೆಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಜಕ್ಕಿನಕೊಪ್ಪದಲ್ಲಿ ನಡೆದಿದೆ.
ಸಂಜಯ್ ಕುಮಾರ್ ಮೃತ ದುರ್ದೈವಿ.
ಈತ ಕಾಳೇನಹಳ್ಳಿ ಗ್ರಾಮದಲ್ಲಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡ್ತಿದ್ದ. ಇದೇ ಗ್ರಾಮದಲ್ಲಿ ಕಲ್ಲು ಕ್ವಾರಿ ನಡೆಸುತ್ತಿದ್ದ ಹರೀಶ್ ಬಾಬು ಹೆಂಡ್ತಿ ಜೊತೆ ಸ್ನೇಹ ಬೆಳೆಸಿದ್ದನು. ಇದು ಹರೀಶ್ ಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ಪತ್ನಿ ಜೊತೆ ಅನೇಕ ಬಾರಿ ಜಗಳವಾಗಿತ್ತು.
ಸಂಜಯ್ ನನ್ನು ಕ್ವಾರಿಗೆ ಕರೆಸಿಕೊಂಡಿದ್ದ ಹರೀಶ್ ಸ್ನೇಹಿತರ ಜೊತೆ ಸೇರಿ ಆತನನ್ನು ಕೊಂದಿದ್ದಾನೆ.


ಸಂಜಯ್ ನಾಪತ್ತೆ ಆಗಿದ್ದ ಹಿನ್ನೆಲೆಯಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಾಗ ಸತ್ಯಾಂಶ ಬಯಲಾಗಿದೆ.
ಶಿಕಾರಿಪುರ ಗ್ರಾಮಾಂತ ಠಾಣೆ ಪೊಲೀಸರು ಸಂಜಯ್ ಶವವನ್ನು ಹೊರತೆಗೆದಿದ್ದು ,ಹರೀಶ್ ಮತ್ತು ಆತನ ಸ್ನೇಹಿತರಾದ ಸುರೇಶ್ ಮತ್ತು ನರಸಿಂಹನನ್ನು ಪೊಲೀಸರು ಬಂಧಿಸಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article