ಸ್ನೇಹಿತನ ಪತ್ನಿಗೆ ದುಷ್ಕರ್ಮಿಯೊಬ್ಬ 22 ಬಾರಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೆ. ಆರ್ ಪುರಂ ಲೇಔಟ್ ನಲ್ಲಿ ನಡೆದಿದೆ. ಲುಮೀನ ಎಂಬ 35 ವರ್ಷದ ಮಹಿಳೆ ಹಲ್ಲೆಗೊಳಗಾದವರು. ರೋಹಿತ್ ಎಂಬಾತ ಆರೋಪಿ.
ಲುಮೀನ ಅವರ ಪತಿ ಪ್ರೇಮ್ ಕುಮಾರ್ ಹಾಗೂ ರೋಹಿತ್ ಬಹುಕಾಲದ ಗೆಳೆಯರು. ಆದರೆ, ನಿನ್ನೆ ನಡುರಸ್ತೆಯಲ್ಲಿ ರೋಹಿತ್ ಲುಮಿನಾಗೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ….! ಸ್ಥಳೀಯ ಕೂಡಲೇ ಲುಮಿನಾರನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಲುಮಿನಾ ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಮಹದೇವಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.