No menu items!
19.4 C
Munich
Saturday, May 2, 2026

ಮಹಿಳೆಯಿಂದ ಯುವಕನ ಮೇಲೆ ಆ್ಯಸಿಡ್ ದಾಳಿ…!

Must read

ಬೆಳಗಾವಿ ಜಿಲ್ಲೆಯ ಕಪಿಲೇಶ್ಚರ ಮಂದಿರದ ಬಳಿ ಓರ್ವ ಮಹಿಳೆ ಯುವಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು, ಗಾಯಾಳು ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ‌.
ಕಪಿಲೇಶ್ವರ ದೇವಸ್ಥಾನದ ಅರ್ಚಕ ರಾಮಾ ಪೂಜಾರಿ ಸಹೋದರಿ ಮಾಧವಿಯಿಂದ ಈ ಕೃತ್ಯ ನಡೆದಿದೆ. ಪ್ರಥಮೇಶ್ ಆ್ಯಸಿಡ್ ದಾಳಿಗೊಳಗಾದ ಯುವಕ.


ಅರ್ಚಕ ರಾಮಾ ಪೂಜಾರಿ ಹಾಗೂ ಪ್ರಥಮೇಶ್ ‌ನಡುವೆ ಜಗಳ ನಡೆದಿದ್ದು, ಭಕ್ತರ ಜೊತೆ ಅರ್ಚಕನ ಅನುಚಿತ ವರ್ತನೆ ಬಗ್ಗೆ ಪ್ರಥಮೇಶ್ ‌ನಾನಾ ಬಾರಿ ಪ್ರಶ್ನೆ‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಚಕನ ಸಹೋದರಿ ಪ್ರಥಮೇಶ್ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾಳೆ.
ಪ್ರಥಮೇಶ್ ಕೈಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article