ರಾಜ್ಯಾದ್ಯಂತ ‘ವೆನಿಲ್ಲಾ’ ಫ್ಲೇವರ್…!

Date:

ಈ ಶುಕ್ರವಾರ ರಾಜ್ಯಾದ್ಯಂತ ‘ವೆನಿಲ್ಲಾ’ ಫ್ಲೇವರ್ ಆವರಿಸಿಕೊಳ್ಳಲಿದೆ. ಅರೇ, ಇದೇನಪ್ಪಾ? ವೆನಿಲ್ಲಾ ಫ್ಲೇವರ್ ಹೇಗೆ ಇಡೀ ರಾಜ್ಯವನ್ನು ಆವರಿಸಿಕೊಳ್ಳುತ್ತೆ ಎಂಬ ಅಚ್ಚರಿಯೊಂದಿಗಿನ ಪ್ರಶ್ನೆಯೊಂದು ನಿಮ್ಮನ್ನು ಕಾಡದೇ ಇರುತ್ತಾ?
ನಾವಿಲ್ಲಿ ಹೇಳ್ತಿರೋದು ಬಹು ನಿರೀಕ್ಷಿತ ‘ವೆನಿಲ್ಲಾ’ ಸಿನಿಮಾ ಬಗ್ಗೆ. ಈಗಾಗಲೇ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿರುವ ವೆನಿಲ್ಲಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


ಬ್ಯೂಟಿಫುಲ್ ಮನಸುಗಳು ಚಿತ್ರದ ನಿರ್ದೇಶಕ ಜಯತೀರ್ಥ ಅವರ ನಿರ್ದೇಶನದ ಚಿತ್ರವಿದು ‘ವೆನಿಲ್ಲಾ’.
ಅವಿನಾಶ್ ಈ ಚಿತ್ರದ ಮೂಲಕ ನಾಯಕ‌ನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ‌ಕೊಡ್ತಿದ್ದಾರೆ. ಸ್ವಾತಿ ಚಿತ್ರದ ನಾಯಕಿ. ನಿರೂಪಕ, ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಹಾಸನ್ (ಟಿವಿ9 ರೆಹಮಾನ್) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಬಳಿಕ ಸುದ್ದಿವಾಹಿನಿಗಳಿಂದ ದೂರವಿರುವ ರೆಹಮಾನ್ ಸದ್ಯಕ್ಕೆ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ವೆನಿಲ್ಲಾದಲ್ಲಿ ಪಯಣ ರವಿಶಂಕರ್ ಪೊಲೀಸ್ ಆಫೀಸರ್ ಆಗಿ‌ ಮಿಂಚಿದ್ದಾರೆ.


ಒಂದು ಕೊಲೆ, ಗುಣಪಡಿಸಲಾಗದ ರೋಗ, ಅದೆಂಥಾ ಕಾಯಿಲಿಯೇ ಇರಲಿ ಅದನ್ನು ಗುಣಪಡಿಸುವ‌ ಶಕ್ತಿ ಹೊಂದಿರುವ ಪ್ರೀತಿಯ ಸುತ್ತಾ ಸುತ್ತವ ‘ವೆನಿಲ್ಲಾ’ ರುಚಿ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎನ್ನುತ್ತದೆ ಚಿತ್ರತಂಡ.
ಸಿನಿಪ್ರಿಯರು ವೆನಿಲ್ಲಾ ವನ್ನು ಹೇಗೆ ಸವಿಯುತ್ತಾರೆ ಎಂಬ ಕುತೂಹಲ ತಣಿಯಲು ಇನ್ನೊಂದೇ ದಿನ ಬಾಕಿ ಇರೋದು. ಟ್ರೇಲರ್ ನೋಡಿದ್ರೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುತ್ತದೆ. ಸಿನಿಮಾ ಹೆಂಗಿದೆ ಅಂತ ಶುಕ್ರವಾರದ ತನಕ ಕಾಯಲೇ ಬೇಕು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...