ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ಗೊತ್ತಿರದ ಹುಡುಗ ಐಟಿ ತಜ್ಞ..! ಮನೆಬಿಟ್ಟು ಬಾಂಬೆಗೆ ಹೋದವ ಉದ್ಯಮಿಯಾದ ಕಥೆ..!

Date:

ಬಾಳಿಗೊಂದು ಗುರಿ, ಗುರಿ ಸಾಧಿಸುವ ಛಲವಿದ್ದರೆ ಖಂಡಿತಾ ಯಶಸ್ಸು ಸಿಕ್ಕೇ ಸಿಗುತ್ತೆ..! ಒಂದಲ್ಲ ಒಂದು ದಿನ ನಾವು ಎತ್ತರಕ್ಕೆ ಬೆಳೆದೇ ಬೆಳೆಯುತ್ತೇವೆ..! ಗುರಿ ತಲುಪುವಾಗ ಎದುರಾಗುವ ಸಮಸ್ಯೆಗಳನ್ನು ಎದೆಗುಂದದೇ ಎದುರಿಸಬೇಕು..! ಮನಸ್ಸಿದ್ದರೆ ಮಾರ್ಗ..! ಇಷ್ಟೆಲ್ಲಾ ಪೀಠಿಕೆ ಹಾಕೋಕೆ ಕಾರಣ `ಸಂತೋಷ್ ಎಸ್ ಅಹುಜಾ’..!
ಹೌದು ಸಂತೋಷ್ ಎಸ್ ಅಹುಜಾರ ಲೈಫ್ ಸ್ಟೋರಿ ಗುರಿಯತ್ತ ಪಯಣಿಸುತ್ತಿರೋ ಪ್ರತಿಯೊಬ್ಬರಿಗೂ ಪ್ರೇರಣೆ..!
ಸಂತೋಷ್ರ ತಂದೆ ಮಧ್ಯಪ್ರದೇಶದ ಜುಬಲ್ಪುರದಲ್ಲಿ ಸ್ಕ್ರೀನ್ ಪ್ರಿಂಟಿಂಗ್ ಕಂಪನಿಯನ್ನು ನಡೆಸ್ತಾ ಇದ್ರು. ಬೇರೆ ಬೇರೆ ಕಾರಣಗಳಿಂದ ಅದನ್ನು ಮುಚ್ಚ ಬೇಕಾಗಿ ಬಂತು. ತುಂಬಾ ನಷ್ಟವನ್ನು ಅನುಭವಿಸಿದ್ರು..! ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಕೆಳಮಟ್ಟ ತಲುಪಿತು..! ಸಂತೋಷ್ ಹಲವು ವರ್ಷಗಳಿಂದ ತನ್ನ ಅಜ್ಜನ ಅಂಗಡಿಯಲ್ಲಿ ಕುಳಿತು ಕೊಂಡಿರ್ತಾ ಇದ್ರು..! ಅಜ್ಜ ದಿನಕ್ಕೆ ಐದು ರೂಪಾಯಿ ಕೊಡ್ತಾ ಇದ್ರು..! ಅಜ್ಜ ಕೊಟ್ಟ ಐದು ರೂಪಾಯಿಗಳನ್ನು ಹಾಗೇ ಕೂಡಿಟ್ಟು ಕೊಂಡು ಅದನ್ನು ತನ್ನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ತಾ ಇದ್ರು ಸಂತೋಷ್..! ಸಂತೋಷ್ ಐಟಿ ತಜ್ಞನಾಗಬೇಕೆಂಬ ಕನಸು ಕಂಡಿದ್ರು.! ಆದರೆ ಕಿತ್ತು ತಿನ್ನೋ ಬಡತನದಿಂದ ಕಂಪ್ಯೂಟರ್ ಕೊಂಡು ಕೊಳ್ಳಲು ಅವರಿಗೆ ಸಾಧ್ಯ ಆಗ್ಲಿಲ್ಲ..!
ತನ್ನ ಕುಟುಂಬದ ಹಸಿವು, ಕಷ್ಟದ ಬದುಕನ್ನು ಕಣ್ಣಾರೆ ನೋಡ್ತಾ ಇದ್ದ, ಸ್ವತಃ ಕಷ್ಟವನ್ನು ಅನುಭವಿಸುತ್ತಲೂ ಇದ್ದ ಸಂತೋಷ್ ಒಂದು ರಾತ್ರಿ ಬಾಂಬೆಗೆ (ಮುಂಬೈ)ಹೋಗಲು ನಿರ್ಧರಿಸಿ ಬಿಡ್ತಾರೆ..! 2005ರ ಒಂದು ದಿನ ಸಂತೋಷ್ ಕೇವಲ 1200 ರೂಗಳನ್ನು ಇಟ್ಕೊಂಡು ಬಾಂಬೆಗೆ ಓಡ್ತಾರೆ..! ಆಗಿನ್ನೂ ಸಂತೋಷ್ಗೆ ಕೇವಲ 19 ವರ್ಷ ಮಾತ್ರ ವಯಸ್ಸಾಗಿತ್ತು..!
18 ದಿನಗಳ ನಂತರ ಸಂತೋಷ್ ಬಾಂಬೆಯನ್ನು ತಲುಪುತ್ತಾರೆ..! ಜೆಡಬ್ಲ್ಯು ಮ್ಯಾರಿಯೊಟ್ ಬಸ್ ನಿಲ್ದಾಣದ ಹೊರಗೇ ಮಲಗಿ ಕೊಳ್ತಾ ಇದ್ರು..! ಹೊಟ್ಟೆಗೆ ಏನೂ ಇಲ್ಲ..! ಬರೀ ಬಿಸ್ಕೇಟ್ ಅನ್ನು ನೀರಿಗೆ ಅದ್ದಿಕೊಂಡು ತಿನ್ತಾ ಇದ್ರು..! ಸ್ಥಳೀಯ ಸ್ನಾನ ಗೃಹದಲ್ಲೇ ಸ್ನಾನ ಮಾಡ್ತಾ ಇದ್ರು..! ತುಂಬಾ ಕಡೆ ಕೆಲಸಗಳನ್ನು ಹುಡುಕಿದ್ರೂ ಸಿಗ್ಲಿಲ್ಲ..! ಪ್ರತಿಯೊಂದು ದೊಡ್ಡ ದೊಡ್ಡ ಕಾಲ್ ಸೆಂಟರ್ಗೆ ಕರೆಮಾಡಿ ಕೆಲಸವನ್ನು ಕೇಳಿದ್ರೂ.. ಯಾರೂ ಸರಾಗವಾಗಿ ಇಂಗ್ಲೀಷ್ ಮಾತಾಡೋಕೆ ಬರಲ್ಲ ಅಂತ ಕೆಲಸ ಕೊಡ್ಲೇ ಇಲ್ಲ..! ಕೆಲಸ ಹುಡುಕಿ ಹುಡುಕಿ ಕೊನೆಗೂ ಸಣ್ಣ ಸ್ಥಳೀಯ ಕಾಲ್ ಸೆಂಟರ್ನಲ್ಲಿ ಮಾಸಿಕ 1600 ರೂ ವೇತನದ ಕೆಲಸಕ್ಕೆ ಸೇರಿಕೊಳ್ತಾರೆ..! ಅವತ್ತಿನ ಮಟ್ಟಿಗೆ ಅವರಿಗೆ ಅದು ದೊಡ್ಡ ಮೊತ್ತವೇ ಆಗಿತ್ತು..! ಅಷ್ಟಾದರೂ ಸಿಗುತ್ತಲ್ಲಾ ಅಂತ ಕೆಲಸಕ್ಕೆ ಹೋದ್ರು..! ಐದು ಜನರ ಜೊತೆ ಸೇರಿ ಸಣ್ಣದಾದ ರೂಂ ಮಾಡಿದ್ರು..! ಬಸ್ ಸ್ಟ್ಯಾಂಡ್ ನಿಂ ದ ರೂಂಗೆ ಶಿಫ್ಟ್ ಆದ್ರು..! ಓವರ್ ಟೈಮ್ ಕೆಲಸ ಮಾಡಿಯೂ ಅಷ್ಟೋ ಇಷ್ಟೋ ಸಂಪಾದನೆ ಮಾಡಿದ್ರು..!
ಕಂಪ್ಯೂಟರ್ನಲ್ಲಿ ಸಣ್ಣ ಸಂದೇಶ ಟೈಪ್ ಮಾಡೋಕೂ ಗಂಟೆಗಟ್ಟಲೆ ತೆಗೆದು ಕೊಳ್ತಾ ಇದ್ದ ಇವರನ್ನು ನೋಡಿ ಎಲ್ಲರೂ ನಗ್ತಾ ಇದ್ರು..! ಆದರೆ ಅವರು ಎದೆಗುಂದಲಿಲ್ಲ..! ಕಷ್ಟಪಟ್ಟು ಅಭ್ಯಾಸ ಮಾಡಿದ್ರು..! 21 ದಿನದ ಇಂಗ್ಲೀಷ್ ಗ್ರಾಮರ್ ಕ್ಲಾಸ್ ಗೆ ಸೇರಿಕೊಂಡ್ರು…! ಅಷ್ಟೇ ಅಲ್ಲದೇ ದಿನಾಲೂ ಆಫೀಸ್ನಿಂದ ಇಂಗ್ಲೀಷ್ ದಿನ ಪತ್ರಿಕೆಯೊಂದನ್ನು ತಂದು ರಾತ್ರಿ ಇಡೀ ಕುಳಿತು ಪತ್ರಿಕೆಯ ಒಂದೇ ಒಂದು ಪದಗಳನ್ನು ಬಿಡದೇ ಓದಿದ್ರು..! ಪೂರ್ತಿ ಪತ್ರಿಕೆ ಓದದೇ ಮಲಗ್ತಾ ಇರ್ಲಿಲ್ಲ..! ಹೀಗೆ ಗ್ರಾಮರ್ ಕ್ಲಾಸ್ ಮತ್ತು ಇಂಗ್ಲೀಷ್ ಪತ್ರಿಕೆಯ ಓದಿನಿಂದ 3 ತಿಂಗಳಲ್ಲಿ ಸರಾಗವಾಗಿ ಇಂಗ್ಲೀಷ್ ಮಾತಾಡುವುದನ್ನು ಕಲಿತರು..! ಕಂಪ್ಯೂಟರ್ನಲ್ಲಿ ಟೈಪ್ ಮಾಡೋದನ್ನು ಕಲಿತರು. ಹೀಗೆ ಇಂಗ್ಲೀಷ್ ಮತ್ತು ಕಂಪ್ಯೂಟರ್ ಜ್ಞಾನವನ್ನು ಪಡೆದು ಬೇರೊಂದು ಕಾಲ್ ಸೆಂಟರ್ನಲ್ಲಿ ಕೆಲಸ ಗಿಟ್ಟಿಸಿಕೊಂಡ್ರು..! ತಿಂಗಳ ಸಂಬಳ 8000ಕ್ಕೆ ತಲುಪಿತು..! ನಿಧಾನಕ್ಕೆ ಹಾರ್ಡ್ ವೇರ್, ಸಾಫ್ಟ್ ವೇರ್ ಬಗ್ಗೆಯೂ ತಿಳಿದು ಕೊಳ್ತಾ ಬಂದ್ರು. ಕೆಲವೇ ತಿಂಗಳಲ್ಲಿ ಐಟಿ ಡಿಪಾರ್ಟ್ ಮೆಂಟ್ ನಲ್ಲಿನ ಇತರರಿಗಿಂತಲೂ ಹೆಚ್ಚಿನ ಜ್ಞಾನವನ್ನು ಸಂಪಾದಿಸಿದ್ರು..!

2007ರಲ್ಲಿ ಮೈಕ್ರೋಸಾಫ್ಟ್ ಮಲ್ಟಿ ಸೇವಾ ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ರು. ಅದೇ ವರ್ಷ ಸ್ವಲ್ಪ ಹಣವನ್ನು ಇಟ್ಕೊಂಡು ಮನೆಯ ಕಡೆ ಹೋದ್ರು. ತಂದೆಯ ಆಫೀಸ್ ಅನ್ನು ಮತ್ತೆ ತೆರೆದರು. ಅಮ್ಮನಿಗಾಗಿ ಟಿವಿ, ವಾಷಿಂಗ್ ಮಿಷನ್ ಅನ್ನು, ತಮ್ಮಂದಿರಿಗಾಗಿ ಕಂಪ್ಯೂಟರ್ ಅನ್ನೂ ಕೊಡಿಸಿದ್ರು..! ನಂತರ ತಾನೇ ಸ್ವಂತ ಉದ್ಯಮವನ್ನು ಸ್ಥಾಪಿಸಲು ಸ್ವಯಂ ಪ್ರೇರಣೆಯಿಂದ ಮುಂದಾದ್ರು..! ಒಬ್ಬನೇ ಒಬ್ಬ ಉದ್ಯೋಗಿಯನ್ನು ಕೆಲಸಕ್ಕೆ ಇಟ್ಕೊಂಡು ಉದ್ಯಮ ಆರಂಭಿಸಿಯೇ ಬಿಟ್ಟರು..! ಆರಂಭದಲ್ಲಿ ಒಂದು ವೆಬ್ ಸೈಟ್ ಮಾಡಿಕೊಟ್ಟಿದ್ದಕ್ಕೆ ಗ್ರಾಹಕರೊಬ್ಬರು 15,000 ರೂಪಾಯಿಗಳನ್ನು ಕೊಟ್ಟರು..! ಅಲ್ಲಿಂದ ಸಂತೋಷ್ ಎಂದೂ ಹಿಂತಿರುಗಿ ನೋಡಲೇ ಇಲ್ಲ..! ಲೆಕ್ಕವಿಲ್ಲಷ್ಟು ವೆಬ್ ಸೈಟ್ ಗಳನ್ನು ರೂಪಿಸಿದ್ದಾರೆ..! ಐಒಎಸ್ ಆ್ಯಪ್ಸ್ ಮತ್ತು ಇದರಿಂದ ಸಾವಿರಾರು ಕಂಪ್ಯೂಟರ್ಗಳ ಸರ್ವೀಸ್ ಮಾಡ್ತಾ ಇದ್ದಾರೆ..! ಇನ್ನೊಂದು ವಿಶೇಷ ಸಂಗತಿ ಅಂದರೆ ಅವತ್ತೊಂದು ದಿನ ಇಂಗ್ಲೀಷ್ ಬರಲ್ಲ, ಕಂಪ್ಯೂಟರ್ ಟೈಪಿಂಗ್ ಬರಲ್ಲ ಅಂತ ನಕ್ಕಿದ್ದ ವ್ಯಕ್ತಿಯೂ ಸಂತೋಷ್ರ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದಾರೆ..! ಅಂದು ನಕ್ಕವನಿಗೆ ಇವತ್ತು ಸಂತೋಷ್ ಬಾಸ್..! ಎಲ್ಲರ ಕಾಲ್ ಎಳಿತದೇ ಕಾಲ..! ಯಾರೂ ಯಾರನ್ನೂ ನೋಡಿ ನಗಬಾರದು..! ಸೋತವನು ಗೆದ್ದೇ ಗೆಲ್ಲುತ್ತಾನೆ..! ಗೆದ್ದು ಸೋಲುವುದಕ್ಕಿಂತ ಸೋತು ಗೆಲ್ಲಬೇಕು..! ಸಂತೋಷ್ ಸೋತು ಗೆದ್ದಿದ್ದಾರೆ. ಕಷ್ಟಪಟ್ಟು ಗುರಿ ಮುಟ್ಟಿದ್ದಾರೆ..! ಅವರ ಪರಿಶ್ರಮಕ್ಕೆ ಜಯ ಸಿಕ್ಕಿದೆ..! ಸಂತೋಷ್ ಎಸ್ ಅಹುಜಾ ಸಂತೋಷ ವಾಗಿದ್ದಾರೆ.

  • ಶಶಿಧರ ಡಿ ಎಸ್ ದೋಣಿಹಕ್ಲು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌

‌ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌ ಬೆಂಗಳೂರು: ಸಿಲಿಕಾನ್‌...

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ: ಡಿ.ಕೆ. ಶಿವಕುಮಾರ್

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ:...

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ಬೆಂಗಳೂರು: ನಗರದ...

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ...