No menu items!
18.2 C
Munich
Tuesday, April 28, 2026

ಕಾಲಿಲ್ಲದ ಕ್ರಿಕೆಟಿಗ ಇಂಗ್ಲೆಂಡನ್ನು ಇನ್ನಿಲ್ಲದಂತೆ ಕಾಡಿದ್ದ..! ಐದು ಓವರ್ ನಲ್ಲಿ 22 ರನ್ ನೀಡಿ, 5 ವಿಕೆಟ್ ಕಿತ್ತಿದ್ದ..!

Must read

ಆತ ವೇಗವಾಗಿ ಬಂದು ಚೆಂಡೆಸೆದ. ಕ್ರೀಸ್ ನಲ್ಲಿ ನಿಂತಿದ್ದ ಆಂಗ್ಲ ಆಟಗಾರ ಬಾಲ್ ಗೆ ಹೊಡೆಯಬೇಕು ಎನ್ನಿಸುವಷ್ಟರಲ್ಲಿ ಅದು ಬೇಲ್ಸ್ ನ್ನು ಎಗರಿಸಿತ್ತು. ಆತ ಪೆವಿಲಿಯನ್ ನತ್ತ ಹೋಗುತ್ತಿರುವಾಗ ನನ್ನಂತಹ ಆಟಗಾರನಿಗೆ ಅವನು ಬೌಲ್ಡ್ ಮಾಡಿದನಲ್ಲ ಎಂದು ಬ್ಯಾಟನ್ನು ನೆಲಕ್ಕೆ ಕುಕ್ಕುತ್ತಾ ಹೋದ. ನಂತರ ಮತ್ತೋರ್ವ ಬಂದ ಆತನಿಗೂ ಅದೇ ಗತಿಯಾಯ್ತು. ಮತ್ತೇ ಬಂದ ಮೂವರು ದಾಂಡಿಗರೂ ಆ ಬೌಲರ್ ನ ಎಸೆತಕ್ಕೆ ಉತ್ತರಿಸದೇ ಪೆವಿಲಿಯನ್ ಸೇರಿದರು. ಅವೆರಲ್ಲರೂ ಆ ಬೌಲರ್ ನ ಬೌಲಿಂಗ್ ನ್ನು ಮೆಚ್ಚಲಿಲ್ಲ. ಬದಲಿಗೆ ಕಾಲಿಲ್ಲದಿದ್ದರೂ ಕೂಡಾ ಸಾಮಾನ್ಯ ಆಟಗಾರರನ್ನು ಪೆವಿಲಿಯನ್ ಗಟ್ಟಿದನಲ್ಲ ಎಂಬ ಅಚ್ಚರಿಯಲ್ಲೇ ಹೆಜ್ಜೆ ಹಾಕಿದರು..!
ಯೆಸ್.. ಪಾಕಿಸ್ತಾನ ಕ್ರಿಕೆಟ್ ಲೋಕದಲ್ಲಿ ಓರ್ವ ಆಟಗಾರನಿದ್ದಾನೆ. ಆತನ ಹೆಸರು ಫರ್ಹಾನ್ ಸಯೀದ್ ಅಂತ. ಆತನ ಕಾಲುಗಳಲ್ಲಿ ಸತ್ವವಿಲ್ಲ. ಆದರೂ ವೇಗವಾಗಿ ಚೆಂಡೆಸೆಯುತ್ತಾನೆ, ವೇಗವಾಗಿ ಓಡಿ ಚೆಂಡು ಹಿಡಿಯುತ್ತಾನೆ..! ಅಚ್ಚರಿ ಎನಿಸಿದರೂ ಇದು ನಿಜ. ಫರ್ಹಾನ್ ಗೆ ಆಸರೆ ಅಂತ ಇರುವುದು ಒಂದು ಕೋಲು. ಅದನ್ನು ಮಗ್ಗುಲಲ್ಲಿ ಹಿಡಿದುಕೊಂಡೇ ಆತ ಚೆಂಡೆಸೆಯುತ್ತಾನೆ. ಅದನ್ನು ಹಿಡಿದುಕೊಂಡೇ ಬ್ಯಾಟ್ ಮಾಡುತ್ತಾನೆ..!
ಕೇವಲ 2 ವರ್ಷದವರನಿದ್ದಾಗಲೇ ಫರ್ಹಾನ್ ಪೋಲಿಯೋಗೆ ತುತ್ತಾಗಿ ಒಂದು ಕಾಲು ಕಳೆದುಕೊಂಡ. ಇನ್ನೊಂದು ಕಾಲಿನಲ್ಲೂ ಹೇಳಿಕೊಳ್ಳುವಂತಹ ಶಕ್ತಿಯಿಲ್ಲ. ಆದರೂ ಅದನ್ನು ಎದುರಿಸುವ ಕಲೆಯನ್ನು ಆತ ಸಿದ್ಧಿಸಿಕೊಂಡಿದ್ದಾನೆ. ಶೋಯೆಬ್ ಅಖ್ತರ್ ಅಭಿಮಾನಿಯಾಗಿರುವ ಈತ ಅಖ್ತರ್ ಮಾದರಿಯಲ್ಲೇ ದೂರದಿಂದ ಬಂದು ಚೆಂಡೆಸೆಯುತ್ತಾನೆ.
2012ರಲ್ಲಿ ಫರ್ಹಾನ್ ಜೀವನದಲ್ಲಿ ಒಂದು ಪವಾಡ ನಡೆಯಿತು. ಅದೇನೆಂದರೆ ಇಂಗ್ಲೆಂಡ್ ವಿರುದ್ದ ಆಡುವ ತಂಡದಲ್ಲಿ ಆತನನ್ನು ಸೇರಿಸಿಕೊಳ್ಳಲಾಯಿತು. ಅದೂ ಕೂಡಾ ಅಂತರಾಷ್ಟ್ರೀಯ ಪಂದ್ಯದಲ್ಲಿ..! ಅಂದು ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಪಾಕಿಸ್ತಾನದ ಅಂಗವಿಕಲ ಎಂಬ ಖ್ಯಾತಿಗೆ ಆತ ಪಾತ್ರನಾಗಿದ್ದ. ಅಂದು ಆಂಗ್ಲರ ವಿರುದ್ಧ ಉತ್ತಮವಾಗಿ ಬೌಲಿಂಗ್ ಮಾಡಿದ್ದ. ಇನ್ನು ಒಂದು ಬಾರಿ ಆತ ಐದು ಓವರ್ ಬೌಲಿಂಗ್ ಮಾಡಿ ಕೇವಲ 22 ರನ್ ನೀಡಿ ಐವರು ಆಟಗಾರರನ್ನು ಪೆವಿಲಿಯನ್ ಗಟ್ಟಿದ್ದ..! ದಿನಗಳೆದಂತೆ ಫರ್ಹಾನ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾನೆ. ಎದುರಾಳಿ ಆಟಗಾರರಿಗೆ ಬೆಚ್ಚಿ ಬೀಳಿಸುವಂತೆ ಆಟ ಆಡುತ್ತಿದ್ದಾನೆ.
ಏನೇ ಆಗಲಿ ಫರ್ಹಾನ್ ನಂತಹ ಆಟಗಾರರು ಕ್ರೀಡಾ ಲೋಕಕ್ಕೆ ಅಗತ್ಯ. ಅಂಥವರು ಇನ್ನೂ ಉತ್ತಮ ಪ್ರದರ್ಶನ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂಬುದೇ ನಮ್ಮ ಆಶಯ

27farhancrop

 

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

102 ಅಡಿ ಎತ್ತರದ ವಿಷ್ಣುವರ್ಧನ್ ಪೋಸ್ಟರ್..ಇದು ದೇಶದಲ್ಲಿ ಅತೀ ಎತ್ತರದ ಪೋಸ್ಟರ್..! #Video

ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ..! ಎಂದೂ ಅವನನ್ನು ಬಿಟ್ಟಿರದ ಅವಳೇಕೆ ದೂರಾದಳು..?!

ಹಸಿದರಿಗಾಗಿ `ರೋಟಿ ಬ್ಯಾಂಕ್’..! ಶ್ರೀಮಂತರು ದಿನಕ್ಕೆ ಎರಡು ರೊಟ್ಟಿಯನ್ನು ಈ ಬ್ಯಾಂಕಿಗೆ ಡೆಪಾಸಿಟ್ ಮಾಡ್ತಾರೆ..!

ನೀವೂ ಸಂಚಾರಿ ನಿಯಮ ಪಾಲಿಸೋದಿಲ್ವಾ ಹಾಗಾದ್ರೆ ಈ ವೀಡಿಯೋ ನೋಡಿ..!

ಒಂದು ಕಾಲದ ವಿಜ್ಞಾನಿ ಇಂದು ಭಿಕ್ಷುಕ..! ಭಾರತದ ಐನ್ ಸ್ಟೀನ್ ನ ದುರಂತ ಕಥೆ ಇದು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article