ಜೀವಮಾನದಲ್ಲಿ ಒಂದೇ ಒಂದು ಸಲವಾದ್ರು ತನ್ನ ಇಷ್ಟದ ನಟನನ್ನು ನೋಡಬೇಕು ಎಂಬ ಆಸೆ ಅಭಿಮಾನಿಗಳಲ್ಲಿರುತ್ತದೆ. ಅದೇರೀತಿ ಇಲ್ಲೊಬ್ಬ ಬಾಲಕನಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ತುಂಬಾ ಇಷ್ಟ. ಅವರ ಜೊತೆ ಮಾತಾಡಬೇಕೆಂಬ ಆಸೆ ಈ ಬಾಲಕನಿಗೆ.
ಹೌದು, ಅಭಿಷೇಕ್ ಗೆ ಸುದೀಪ್ ಅವರನ್ನು ನೋಡಬೇಕು ಎಂಬ ಆಸೆ. ಈತ ಸ್ನಾಯು ದೌರ್ಬಲ್ಯದಿಂದ ಬಳಲುತ್ತಿದ್ದಾನೆ. ಸುದೀಪ್ ಶನಿವಾರ ಅಭಿಷೇಕ್ ನನ್ನು ಭೇಟಿಯಾಗಿ ದೈರ್ಯ ತುಂಬಿದ್ದಾರೆ. ತಮ್ಮ ಮನೆಗೆ ಅಭಿಷೇಕ್ ನನ್ನು ಕರೆಸಿಕೊಂಡು ಆರೋಗ್ಯ ವಿಚಾರಿಸಿದ್ದಾರೆ. ಅವನನ್ನು ಎತ್ತಿಕೊಂಡು ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ.
"Duchenne Muscular Dystrophy" ಎಂಬ ಖಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಅಭಿಮಾನಿ "ಅಭಿಷೇಕ್" ನಮ್ಮ ಕಿಚ್ಚ ಸುದೀಪಣ್ಣ ನವರನ್ನ ಕಾಣುವ ಮಹಾದಾಸೆಯನ್ನು ಹೊಂದಿದ್ದರು.
ಇಂತಹ ವಿಶೇಷ ಅಭಿಮಾನಿಯ ಆಸೆಯನ್ನು ಈಡೇರಿಸಲು ಇಂದು ನಮ್ಮ ಪ್ರೀತಿಯ @KicchaSudeep ಅಣ್ಣತಮ್ಮ ನಿವಾಸಕ್ಕೆ ಕರೆಸಿಕೊಂಡು ಉಪಚರಿಸಿ ಧೈರ್ಯ ತುಂಬಿ ಕಳುಹಿಸಿದರು.. pic.twitter.com/SFb6QOaFxG— Kicchana Hudugru (@KicchanHudugru) June 2, 2018