ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜೂ.11 ಹಾಗೂ ಶುಲ್ಕ ಪಾವತಿಸಲು ಜೂ.13ರವರೆಗೆ ವಿಸ್ತರಿಸಿ ಪೊಲೀಸ್ ನೇಮಕ ಸಮಿತಿ ಅಧಿಸೂಚನೆ ಹೊರಡಿಸಿದೆ.
ಫೆ.22ರಂದು 164 ಎಸ್ ಐ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ಇಲಾಖೆ , ಏ. 14ಕ್ಕೆ ಕೊನೆಯ ದಿನ ನಿಗಧಿಪಡಿಸಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಏ.7ಕ್ಕೆ ಅರ್ಜಿಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಳಿಸಿತ್ತು.
164 ಎಸ್ ಐ ಹುದ್ದೆಯೊಡನೆ ಹೆಚ್ಚುವರಿಯಾಗಿ ಖಾಲಿ ಇರುವ 26 ಹುದ್ದೆಗಳನ್ನು ಸೇರಿಸಿ ಅರ್ಜಿ ಆಹ್ವಾನಿಸಲಾಗಿದೆ.