ಚಿಕ್ಕಮಗಳೂರು , ಹಾಸನ ಹಾಗೂ ಮಡಿಕೇರಿಯಲ್ಲಿ ಸತತ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಇಳಿಮುಖವಾಗಿದೆ.ಶೃಂಗೇರಿ ,ಕೊಪ್ಪ, ಮೂಡಿಗೆರೆ , ಎನ್ ಆರ್ ಪುರ ತಾಲೂಕುಗಳಲ್ಲಿ ನಿನ್ನೆ ಸಂಜೆಯಿಂದಲೇ ಮಳೆ ಕಡಿಮೆಯಾಗಿದ್ದು, ಈ ಭಾಗಗಳು ಸಹಜ ಸ್ಥಿತಿಗೆ ಮರಳಿವೆ.
ಜಲಾವೃತವಾಗಿದ್ದ ಶೃಂಗೇರಿ ಶಾರದ ಪೀಠದಲ್ಲಿ ಸಹ ನೀರಿನ ಪ್ರಮಾಣ ತಗ್ಗಿದೆ.
ತುಂಬಾ ಭದ್ರ ನದಿಗಳಲ್ಲಿ ನೀರಿನಮಟ್ಟ ಜಾಸ್ತಿಯಾಗಿ ಇವು ತುಂಬಿ ಹರಿದಿದ್ದರಿಂದ ಜಲಾವೃತಗೊಂಡಿದ್ದ ರಸ್ತೆಗಳಲ್ಲಿ ಸಂಚಾರ ಪುನರಾರಾಂಭವಾಗಿದೆ. ಚಾರ್ಮುಡಿ ಘಾಟ್ ನಲ್ಲಿ ಸಹ ಸಂಚಾರ ಆರಂಭವಾಗಿದೆ.
ಇನ್ನು ಮಡಿಕೇರಿಯಲ್ಲಿಯೂ ಮಳೆ ಕಡಿಮೆಯಾಗಿದೆ. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.