No menu items!
23.4 C
Munich
Saturday, May 2, 2026

ಮೋದಿ ಮನೆ ಮೇಲೆ ಯುಎಫ್ ಒ…!

Must read

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ನಕ್ಸಲರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವರದಿ ಬೆನ್ನಲ್ಲೇ ನವದೆಹಲಿಯಲ್ಲಿನ ಅವರ ಮನೆಯ ಮೇಲೆ ಇತ್ತೀಚೆಗೆ ಯುಎಫ್ ಒ (ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಅಬ್ಜೆಕ್ಟ್ , ಅಂದರೆ ಗುರುತಿಸಲಾಗದ ಹಾರಡುತ್ತಿದ್ದ ವಸ್ತು) ಪತ್ತೆಯಾಗಿ ಆತಂಕ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ. ಯುಎಫ್ ಒ ಪತ್ತೆಯಾದ ಬೆನ್ನಲ್ಲೇ ಇಡೀ ಪ್ರದೇಶದಲ್ಲಿ ತಪಾಸಣೆ ನಡೆಸಲಾಗಿದ್ದು , ಯಾವುದೇ ಅಪಾಯಕಾರಿ ವಸ್ತುಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಯುಎಫ್ ಒ ಪತ್ತೆಯಾಗಿರುವುದು ದೆಹಲಿ ಪೊಲೀಸರು ಖಚಿತಪಡಿಸಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನವು ಮಾಹಿತಿ ಬಹಿರಂಗಪಡಿಸಿಲ್ಲ.


ಪ್ರಧಾನಮಂತ್ರಿಗಳ ಮನೆಯ ಸುತ್ತಮುತ್ತಲಿನ 2 ಕಿಮೀ ಪ್ರದೇಶವನ್ನು ಹಾರಾಟ ನಿಷಿದ್ಧ ವಲಯ ಎಂದು ಘೋಷಿಸಲಾಗಿದೆ.‌ ಜೂ 7 ರಂದು ಸಂಜೆ 7.30 ರ ಸುಮಾರಿಗೆ ಗುರುತಿಸಲಾಗದ ವಸ್ತುವೊಂದರ ಹಾರಾಟ ಕಂಡುಬಂದಿತ್ತು.
ಪ್ರಧಾನಿ ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್‌ಪಿಜಿ ಸಿಬ್ಬಂದಿ ದೆಹಲಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ಧಾವಿಸುವುದರ ಒಳಗೆ ಯುಎಫ್‌ಒ ನಾಪತ್ತೆಯಾಗಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article