ಕುಡಿಯಲು ಹಣ ನೀಡಿಲ್ಲ ಎಂದು ಪತಿಯೋರ್ವ ತಾನು ಬೆಂಕಿ ಹಚ್ಚಿಕೊಂಡು ಪತ್ನಿಯನ್ನು ತಬ್ಬಿಕೊಂಡ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕರೇ ದುಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದೆ..
ಬೆಂಕಿ ಹಚ್ಚಿಕೊಂಡ ಪತಿ ಲೋಕೇಶ್ (40) ಮೃತಪಟ್ಟಿದ್ದಾನೆ. ಪತ್ನಿ ಮರಿಬಸಮ್ಮ (38) ಸ್ಥಿತಿ ಗಂಭೀರವಾಗಿದೆ.
ಕುಡಿಯಲು ಹಣ ನೀಡುವಂತೆ ಲೋಕೇಶ್ ಪತ್ನಿಯನ್ನು ನಿತ್ಯ ಪೀಡಿಸುತ್ತಿದ್ದ. ನಿನ್ನೆ ಇದೇ ವಿಚಾರದಲ್ಲಿ ಜಗಳವಾಗಿದೆ. ಹಣ ನೀಡಲು ಪತ್ನಿ ನಿರಾಕರಿಸಿದ್ದಕ್ಕೆ ಲೋಕೇಶ್ ಬೆಂಕಿ ಹಚ್ಚಿಕೊಂಡಿದ್ದಾನೆ..! ಬಳಿಕ ಉರಿಯುವ ಬೆಂಕಿಯೊಂದಿಗೆ ಪತ್ನಿಯನ್ನು ತಬ್ಬಿಕೊಂಡಿದ್ದಾನೆ. ಪತ್ನಿ ಮರಿಬಸಮ್ಮ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.