ವಾಟ್ಸಪ್ ನಲ್ಲಿ ಬರುವ ಸಂದೇಶ ಸತ್ಯನಾ ಅಥವಾ ಸುಳ್ಳಾ? ತಿಳಿಯುವುದು ಹೀಗೆ….!

1
123

ಸೋಶಿಯಲ್ ಮೀಡಿಯಾ, ಅದರಲ್ಲೂ ವಾಟ್ಸಪ್ ನಲ್ಲಿ ನಿತ್ಯ ಸಾವಿರಾರು ಸಂದೇಶಗಳು ಹರಿದಾಡುತ್ತಿರುತ್ತವೆ.‌ಇವುಗಳಲ್ಲಿ ಸತ್ಯ ಯಾವ್ದೋ ಸುಳ್ ಯಾವ್ದೊ? ಎಷ್ಟೋ ಮೆಸೇಜ್ ಗಳಿಂದ ಹಲ್ಲೆ, ಕೊಲೆ ಕೂಡ ಆಗಿದೆ…!
ಆದ್ದರಿಂದ ಇದನ್ನು ತಡೆಗಟ್ಟುವ ಅಗತ್ಯವಿದೆ. ಈ ನಿಟ್ಟಿನಲ್ಲಿ ದೆಹಲಿಯ ಐಐಟಿಯ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಪೊನ್ನರುಂಗಮ್ ಕುಮಾರಗುರು ನೇತೃತ್ವದ ತಂಡ ಸುಳ್ಳು ಸುದ್ದಿ ಪತ್ತೆ ಹಚ್ಚಲು ಹೊಸ ಆ್ಯಪ್ ಸಿದ್ದಪಡಿಸಿದ್ದಾರೆ.‌

ಈ ಆ್ಯಪ್ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿರುವ ತಂಡ 9354325700 ನಂಬರ್ ನೀಡಿದ್ದಾರೆ. ಈ ನಂಬರ್ ಗೆ ಅನುಮಾನಾಸ್ಪದ ಪೋಸ್ಟ್ ಗಳನ್ನು ಕಳುಹಿಸಬಹುದು. ಆ ಮೆಸೇಜ್ ಒಂದು ಬಾರಿ ರಿಸೀವ್ ಆದ ತಕ್ಷಣ ಕಲರ್‌ಕೋಡ್ಸ್ ಕಂಡು ಬರುತ್ತದೆ.‌ ಹಸಿರು ಬಣ್ಣ ಬಂದರೆ ಅದು ನಿಜವಾದ ಸಂದೇಶ, ಹಳದಿ ಬಣ್ಣ ಬಂದರೆ ಅದು ಸುಳ್ಳು ಅಥವಾ ಸತ್ಯ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಥಲೂ, ಕೆಂಪುಬಣ್ಣ ಬಂದ್ರೆ ಅದು ಪಕ್ಕಾ ಸುಳ್ಳು ಎಂಥಲೂ ಅರ್ಥ ಎಂದು ತಂಡ ಹೇಳಿದೆ.‌

1 COMMENT

LEAVE A REPLY

Please enter your comment!
Please enter your name here