ದಾಂಪತ್ಯಕ್ಕೆ ಕಾಲಿಟ್ಟಲ್ಲಿಂದ ಕಷ್ಟ-ಸುಖ ಹಂಚಿಕೊಂಡು ಬಾಳಿದ ಪತಿ -ಪತ್ನಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿಯ ಹೊಂಬೇಗೌಡ (70) , ಮಂಜಮ್ಮ (65) ಸಾವಿನಲ್ಲಿಯೂ ಒಂದಾದ ದಂಪತಿ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಹೊಂಬೇಗೌಡ ಕುಡಿಯಲು ನೀರು ಕೇಳಿದ್ದಾರೆ. ಮಂಜಮ್ಮ ನೀರು ಕುಡಿಸಿದ್ದಾರೆ. ಅಷ್ಟೇ…ವಿಧಿ ಅವರನ್ನು ಕರೆದುಕೊಂಡಿದೆ. ಅವರ ಬೆನ್ನಲ್ಲೇ ಮಂಜಮ್ಮ ಕೂಡ ವಿಧಿವಶರಾಗಿದ್ದಾರೆ.