ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾರ್ಯಕ್ರಮಗಳಲ್ಲಿ ಹಾಡುವುದನ್ನು ನೀವು ನೋಡಿದ್ದೀರಿ. ಕಿಚ್ಚ ಅದ್ಭುತ ನಟ ಮಾತ್ರವಲ್ಲ. ಅವರಿಗೆ ಹಾಡುವ ಕಲೆಯೂ ಸಿದ್ಧಿಸಿದೆ.
ಸುದೀಪ್ ಅವರಿಗೆ ಇದೊಂದು ಹಾಡು ಅಂದ್ರೆ ತುಂಬಾ ಇಷ್ಟ. ಬಹುತೇಕ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಹೇಳ್ತಿರ್ತಾರೆ.
ಸುದೀಪ್ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿ..ವಿಷ್ಣುದಾದಾ ಅವರ ಮೇಲಿನ ಅಭಿಮಾನವನ್ನು ಸಿನಿಮಾ ಸೇರಿದಂತೆ ಸಾಕಷ್ಟು ಬಾರಿ ತೋರಿಸಿದ್ದಾರೆ ಸುದೀಪ್.
ಅಂದಹಾಗೆ ಸುದೀಪ್ ಅವರಿಗೆ ಇಷ್ಟವಾದ ಹಾಡು ತತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಹಾಡು ತುಂಬಾ ಇಷ್ಟ. ಇದನ್ನು ಆಗಾಗಾ ಹೇಳ್ತಿರ್ತಾರೆ.
ಈ ಹಾಡಂದ್ರೆ ಸುದೀಪ್ ಅವರಿಗೆ ತುಂಬಾ ಇಷ್ಟ. ಸಂದರ್ಭಕ್ಕೆ ತಕ್ಕ ಹಾಗೆ ಈ ಹಾಡನ್ನ ಹೆಚ್ಚು ಕೇಳ್ತಾರೆ. ಇತ್ತೀಚಿಗಷ್ಟೆ ಚುಂಚನಕಟ್ಟೆಯ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುದೀಪ್ ವೇದಿಕೆ ಮೇಲೆ ಈ ಹಾಡನ್ನ ಹಾಡಿ ಅಭಿಮಾನಿಗಳನ್ನ ರಂಜಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚುಂಚನಕಟ್ಟೆಯ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಪ್ರೀತಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಣ್ಣ
ಪ್ರತಿಯೊಂದು ವೇದಿಕೆಯಲ್ಲಿಕಿಚ್ಚ ಸುದೀಪ್ ಅಣ್ಣನ ಮನಸ್ಸಿಗೆ ಹತ್ತಿರವಾದ ಮಹಾನ್ ವ್ಯಕ್ತಿ ಡಾ ವಿಷ್ಣುದಾದ ರವರ ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಹಾಡನ್ನು ಹಾಡಿದರು
ವಿಷ್ಣುದಾದರ ಪ್ರತೀ ರೂಪ ನಮ್ಮ @KicchaSudeep ಅಣ್ಣ pic.twitter.com/vAexy92QO1— DDKSSS official ® (@ddksssofficial) August 13, 2018