ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತೆಯೇ ಅವರ ಪತ್ನಿ ವಿಜಯಲಕ್ಷ್ಮೀ ಅವರು ಸಹ ಪ್ರಾಣಿ ಪ್ರಿಯರು. ವಿಜಯಲಕ್ಷ್ಮೀ ಅವರಿಗೆ ಬೆಕ್ಕುಗಳೆಂದರೆ ವಿಶೇಷ ಪ್ರೀತಿ. ನಾನಾ ರೀತಿಯ ಬೆಕ್ಕುಗಳನ್ನು ವಿಜಯಲಕ್ಷ್ಮೀ ಅವರು ಸಾಕಿದ್ದಾರೆ. ಟ್ವೀಟ್ಟರ್ ನಲ್ಲಿ ಕಪ್ಪು ಬೆಕ್ಕಿನ ಫೋಟೋ ಹಾಕಿದ್ದಾರೆ ವಿಜಯಲಕ್ಷ್ಮೀ .
‘ಕಪ್ಪು ಬೆಕ್ಕು ಅಡ್ಡ ಬ<ದರೆ ಅಶುಭ ಎನ್ನುತ್ತಾರೆ. ಆದರೆ, ಎಲ್ಲಾದರು ನಿಮಗೆ ಕಪ್ಪು ಬೆಕ್ಕು ಎದುರು ಬಂದರೆ ಅದನ್ನು ಪ್ರೀತಿಯಿಂದ ಕಾಣುವಂತೆ ವಿಜಯಲಕ್ಷ್ಮೀ ಸಂದೇಶ ನೀಡಿದ್ದಾರೆ. ಈ ಮೂಲಕ ಕಪ್ಪು ಬೆಕ್ಕಿನ ಬಗೆಗಿನ ತಪ್ಪು ಕಲ್ಪನೆಯನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.
They say crossing a black cat is bad luck but if u see one….be sure to pet it because it’s a nice animal that deserves to be loved❤️ pic.twitter.com/KmlStb7phI
— VijayalakshmiDarshan (@vijayaananth2) August 12, 2018
ನಿಮಗೆ ಗೊತ್ತಿರುವಂತೆ ನಟ ದರ್ಶನ್ ಸಹ ಪ್ರಾಣಿ ಪ್ರಿಯರು., ಏಳೆಂಟು ನಾಯಿಗಳನ್ನು, ಕುದುರೆ ಸೇರಿದಂತೆ ಅನೇಕ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಸಹ ಸಾಕಿದ್ದಾರೆ. ಮೈಸೂರು ಮೃಗಾಲಯದಲ್ಲಿ ಅನೆ ಹಾಗೂ ಹುಲಿಗಳನ್ನು ದತ್ತು ಪಡೆದಿದ್ದಾರೆ. ಇದನ್ನಿಲ್ಲಿ ನಾವು ಸ್ಮರಿಸಬಹುದು.