ಕೆಎಸ್ ಆರ್ ಟಿಸಿ ಅಂಬಾರಿ ಬಸ್ ಬೆಂಕಿಗಾಹುತಿ ಆಗಿದ್ದು, ಚಾಲಕನ ಜಾಗರೂಕತೆಯಿಂದಾಗಿ ಸಂಭವಿಸಬಹುದಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಬೆಂಗಳೂರಿನ ಕೆ.ಆರ್ ಪುರ ಬಳಿಯ ಐಟಿಐ ತೂಗು ಸೇತುವೆ ಮೇಲೆ ಈ ಘಟನೆ ನಡೆದಿದೆ. ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಇದಾಗಿತ್ತು. ಇಂಜಿನ್ ನಲ್ಲಿ ಕೆಟ್ಟು, ಬೆಂಕಿ ಹೊತ್ತಿಕೊಂಡಿದೆ. ಬಸ್ ನ ಹಿಂಬದಿಯಲ್ಲಿ ಹೊಗೆಯಾಡುತ್ತಿರುವುದನ್ನು ಕಂಡು ಚಾಲಕ ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಘಟನೆ ನಡೆದಿದ್ದು ಬೆಳಗ್ಗಿನ ಜಾವ 5.30ರ ಸುಮಾರಿಗೆ.
ಈ ವೇಳೆ 20 ಮಂದಿ ಪ್ರಯಾಣಿಕರು ಬಸ್ ನಲ್ಲಿದ್ದರಯ. ಕೆ. ಆರ್ ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.