ಪತಿ ದರ್ಶನ್ ಅಂತೆ ಪತ್ನಿ ವಿಜಯಲಕ್ಷ್ಮೀ

Must read

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತೆಯೇ ಅವರ ಪತ್ನಿ ವಿಜಯಲಕ್ಷ್ಮೀ ಅವರು ಸಹ ಪ್ರಾಣಿ ಪ್ರಿಯರು.  ವಿಜಯಲಕ್ಷ್ಮೀ ಅವರಿಗೆ ಬೆಕ್ಕುಗಳೆಂದರೆ ವಿಶೇಷ ಪ್ರೀತಿ. ನಾನಾ ರೀತಿಯ ಬೆಕ್ಕುಗಳನ್ನು ವಿಜಯಲಕ್ಷ್ಮೀ ಅವರು ಸಾಕಿದ್ದಾರೆ. ಟ್ವೀಟ್ಟರ್ ನಲ್ಲಿ  ಕಪ್ಪು ಬೆಕ್ಕಿನ ಫೋಟೋ ಹಾಕಿದ್ದಾರೆ ವಿಜಯಲಕ್ಷ್ಮೀ .

‘ಕಪ್ಪು ಬೆಕ್ಕು ಅಡ್ಡ ಬ<ದರೆ ಅಶುಭ ಎನ್ನುತ್ತಾರೆ. ಆದರೆ, ಎಲ್ಲಾದರು ನಿಮಗೆ ಕಪ್ಪು ಬೆಕ್ಕು ಎದುರು ಬಂದರೆ ಅದನ್ನು ಪ್ರೀತಿಯಿಂದ ಕಾಣುವಂತೆ ವಿಜಯಲಕ್ಷ್ಮೀ ಸಂದೇಶ ನೀಡಿದ್ದಾರೆ. ಈ ಮೂಲಕ ಕಪ್ಪು ಬೆಕ್ಕಿನ ಬಗೆಗಿನ ತಪ್ಪು ಕಲ್ಪನೆಯನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.

 

ನಿಮಗೆ ಗೊತ್ತಿರುವಂತೆ ನಟ ದರ್ಶನ್ ಸಹ ಪ್ರಾಣಿ ಪ್ರಿಯರು., ಏಳೆಂಟು ನಾಯಿಗಳನ್ನು,  ಕುದುರೆ ಸೇರಿದಂತೆ ಅನೇಕ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಸಹ ಸಾಕಿದ್ದಾರೆ. ಮೈಸೂರು ಮೃಗಾಲಯದಲ್ಲಿ ಅನೆ ಹಾಗೂ ಹುಲಿಗಳನ್ನು ದತ್ತು ಪಡೆದಿದ್ದಾರೆ. ಇದನ್ನಿಲ್ಲಿ ನಾವು ಸ್ಮರಿಸಬಹುದು.

- Advertisement -spot_img

More articles

- Advertisement -spot_img

Latest article