ನಟ ತಿಲಕ್ ಶೇಖರ್ ಮತ್ತು ನಟಿ ಮೇಘನಾ ರಾಜ್ ಇದೀಗ ಕಣ್ಣುಗಳನ್ನು ಪ್ರಶ್ನಿಸುತ್ತಿದ್ದಾರೆ….!
‘ಕಣ್ಣುಗಳೇ ಹೇಳಿ ನಿಮ್ಮ ಕೆಲಸ ಏನಂತ?’ ನೋಡೋದ…? ಕಾಡೋದ…? ಎಂಬುದು ಇವರಿಬ್ಬರ ಪ್ರಶ್ನೆ..!ಹೌದು, ಹೀಗೆಂದು ‘ಇರುವುದೆಲ್ಲವ ಬಿಟ್ಟು’ ಸಿನಿಮಾದಲ್ಲಿ ಪ್ರಶ್ನೆ ಮಾಡ್ತಿದ್ದಾರೆ.
ಉಗ್ರಂ, ಕರ್ವ ಖ್ಯಾತಿಯ ನಟ ತಿಲಕ್ ಶೇಖರ್ ಮತ್ತು ಮೇಘನಾ ರಾಜ್ ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದಾರೆ.
ಈ ಸಿನಿಮಾದಲ್ಲಿನ ಸೊಗಸಾದ ಒಂದು ಹಾಡು, ‘ಕಣ್ಣುಗಳೇ ಹೇಳಿ ನಿಮ್ಮ ಕೆಲಸ ಏನಂತ’ ? ಈ ಹಾಡಿನ ವೀಡಿಯೋ ಸಾಂಗ್ ಇಂದು ರಿಲೀಸ್ ಆಗಿದೆ.
ಕಾಂತಕನ್ನಲ್ಲಿ ನಿರ್ದೇಶನದ ಚಿತ್ರವಿದು.ದಾವಣಗೆರಡ ದೇವರಾಜ್ ಅವರು ಬಂಡವಾಳ ಹಾಕಿದ್ದಾರೆ. ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್, ಕವಿರಾಜ್, ಕಾಂತಕನ್ನಲ್ಲಿ ಅವರ ಸಾಹಿತ್ಯವಿದೆ. ಸಂಗೀತ ಬಲ ನೀಡಿದ್ದಾರೆ ಶ್ರೀಧರ್ ವಿ ಸಂಭ್ರಮ್.
ತಿಲಕ್,ಮೇಘನಾ ಅವರಲ್ಲದೆ ಶ್ರೀಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್,ರಾಯಣ್ಣ, ರಿಚರ್ಡ್ ಲೂಯಿಸ್ ಮತ್ತಿತರರು ತಾರಾಗಣದಲ್ಲಿದ್ದಾರೆ.