ಅಪ್ಪ-ಅಮ್ಮ ಕೆಳಗೆ ಬಿದ್ರು, ,2 ವರ್ಷದ ಮಗು ಮಾತ್ರವೇ ಬೈಕ್ ನಲ್ಲಿ ಮುಂದೆ ಹೋಯ್ತು…! ಮುಂದೇನಾಯ್ತು ಅನ್ನೋದೇ ಇನ್ನೂ ಆಶ್ಚರ್ಯದ ಸಂಗತಿ…!
ಅದೃಷ್ಟ ನೆಟ್ಟಗಿದ್ರೆ ಎಂಥಾ ದೊಡ್ಡ ಅಪಘಾತದಲ್ಲಿ ಬೇಕಾದ್ರು ಪವಾಡ ಸದೃಶ ರೀತಿಯಲ್ಲಿ ಬದುಕುಳಿಯುತ್ತೀವಿ. ಅದೃಷ್ಟ ಕೆಟ್ಟರೆ ಎಡವಿ ಬಿದ್ರೂ ಸಾಯಬಹುದು…!
ಭೀಕರ ಅಪಘಾತವೊಂದರಲ್ಲಿ ಒಂದು ಕುಟುಂಬ ಆಶ್ಚರ್ಯಕರವಾದ ರೀತಿಯಲ್ಲಿ ಬದುಕುಳಿದಿದೆ.
ಈ ಘಟನೆ ನಡೆದಿರುವುದು ಬೆಂಗಳೂರಿನ ನೆಲಮಂಗಲ ಮುಖ್ಯ ರಸ್ತೆಯಲ್ಲಿ.
ಕುಣಿಗಲ್ ನಿಂದ ಮಲ್ಲೇಶ್ವರಂ ನಲ್ಲಿನ ಸಂಬಂಧಿಕರ ಮನೆಗೆ ದಂಪತಿ, ತಮ್ಮ ಮಗು ಜೊತೆ ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ನೆಲಮಂಗಲ ಮುಖ್ಯರಸ್ತೆಯಲ್ಲಿ ಇವರ ಬೈಕ್ ನಿಯಂತ್ರಣ ತಪ್ಪಿ ಎದುರು ಹೋಗ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಕೂಡಲೇ ದಂಪತಿ ರಸ್ತೆ ಮೇಲೆ ಬಿದ್ದಿದ್ದಾರೆ. ಆದರೆ, ಟ್ಯಾಂಕ್ ಮೇಲೆ ಕುಳಿತಿದ್ದ ಮಗು ಮಾತ್ರ. ಹಾಗೆಯೇ ಸುಮಾರು 300ಮೀ ಮುಂದೆ ಹೋಗಿದೆ..! ನಂತರ ಡಿವೈಡರ್ ಮೇಲಿದ್ದ ಹುಲ್ಲಿನ ಮೇಲೆ ಬಿದ್ದಿದೆ .ಅದೃಷ್ಟವಶಾತ್ ಯಾವುದೇ ಗಾಯ ಸಹ ಆಗಿಲ್ಲ. ಈ ಮಗುವಿನ ತಂದೆ ಮತ್ತು ತಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Death escapade
Mistakes Highlighted – speed, no helmets, overtaking from left side & using mobile phones..Why the baby was supposed to pay the price for your mistakes?
Fortunately, the kid was unhurt and safe.
PS:These kinds of miracles don't happen often!#AbideTrafficRules pic.twitter.com/ecOm6ZLCpL
— BCP MAN (@HMLokesh) August 20, 2018