ಜಯ ಪ್ರಕಾಶ್ ಶೆಟ್ಟಿ, ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಕನ್ನಡ ದೃಶ್ಯ ಮಾಧ್ಯಮ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಪತ್ರಕರ್ತರು. ಅನ್ಯಾಯದ ವಿರುದ್ಧದ ದನಿಯಾಗಿ ಕನ್ನಡಿಗರ ಮನ ಗೆದ್ದಿರುವ ನಿರೂಪಕರು, ಪತ್ರಕರು.
ಕನ್ನಡ ಪತ್ರಿಕೋದ್ಯಮ ಕಂಡಿರುವ ಅಪರೂಪದ ಪತ್ರಕರ್ತ, ಕಂಚಿನ ಕಂಠದ ನಿರೂಪಕರಾದ ಜಯಪ್ರಕಾಶ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲೂ ದೂಳೆಬ್ಬಿಸುತ್ತಿದ್ದಾರೆ…! ಈಗ ಸೋಶಿಯಲ್ ಮೀಡಿಯಾದಲ್ಲಿ ಈ ಶೆಟ್ರುದ್ದೇ ಹವಾ…!
ವರುಣ ರುದ್ರ ನರ್ತನಕ್ಕೆ ಕೊಡಗು ನಲುಗಿರುವ ಕೊಡಗಿನ ನೆರವಿಗೆ ಧಾವಿಸುವಂತೆ ತಮ್ಮ ನ್ಯೂಸ್ ಚಾನಲ್ ನ್ನು ಮೂಲಕ ಇವರು ಕರೆಕೊಟ್ಟಾಗ ಸಾಗರೋಪಾದಿಯಲ್ಲಿ ಅಗತ್ಯ ವಸ್ತುಗಳು ಸುವರ್ಣ ಚಾನಲ್ ತಲುಪಿದವು. ಇವುಗಳನ್ನು ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಸುವರ್ಣ ತಂಡದಿಂದಾಯಿತು. ಅದಕ್ಕಿಂತ ಹೆಚ್ಚಾಗಿ ಈಗ ಈ ಶೆಟ್ರು ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಠಿಸಿರೋದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರ ವರ್ತನೆ ಖಂಡಿಸಿದ್ದಕ್ಕೆ…!
ಹೌದು, ನೆರೆ ಸಂತ್ರಸ್ತರಿಗೆ ಸಚಿವ ರೇವಣ್ಣ ಬಿಸ್ಕೇಟ್ ಎಸೆದಿರೋದನ್ನು ಗಟ್ಟಿ ದನಿಯಲ್ಲಿ ಪ್ರಶ್ನಿಸಿದವರು ಜಯಪ್ರಕಾಶ್ ಶೆಟ್ಟಿ. ಸುವರ್ಣ ಪರದೆ ಅಲಂಕರಿಸಿ ರೇವಣ್ಣ ಅವರನ್ನು ಹಿಗ್ಗಾಮುಗ್ಗಾ ಜಾಡಿಸಿದ ಇವರನ್ನು ನಾಡಿನ ಜನ ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಘರ್ಜನೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ವೀಡಿಯೋವನ್ನು ಇಲ್ಲಿ ನೋಡಿ..
ಹಾಗೇ ಈ ಹಿಂದೆ ಇವರ ಬಗ್ಗೆ ನಾವು ಪ್ರಕಟಿಸಿದ್ದ ಲೇಖನ ಇಲ್ಲಿದೆ ಕ್ಲಿಕ್ ಮಾಡಿ. ಅಂದು ಓದದೇ ಇದ್ದರೆ ಇಂದು ಓದಿ.