ಪ್ರತಿದಿನ, ಎರಡು ದಿನಕ್ಕೊಮ್ಮೆ, ವಾರಕ್ಕೊಮ್ಮೆ , ತಿಂಗಳಿಗೊಮ್ಮೆ , ಆಗಾಗ ಅಂತಲ್ಲ ಕುಡಿಯೋ ಪ್ರತಿಯೊಬ್ಬರೂ ಓದಲೇ ಬೇಕಾದ ಸ್ಟೋರಿ ಇದು.
ಕೆಲವರು ಹೇಳುತ್ತಾರೆ ಆಗಾಗ ಕುಡಿದ್ರೆ ಏನೂ ಆಗಲ್ಲ ಅಂತ….ಹಾಗೇನಿಲ್ಲ….ಯಾವಾಗ ಕುಡಿದ್ರು ಅಪಾಯ ಕಟ್ಟಿಟ್ಟ ಬುತ್ತಿಯೇ…ಆರೋಗ್ಯ ಯಕ್ಕುಟ್ಟು ಹೋಗುತ್ತೆ ಎಂಬ ಶಾಕಿಂಗ್ ವಿಷಯ ಸಂಶೋಧನೆಯೊಂದರಿಂದ ತಿಳಿದು ಬಂದಿದೆ.
195 ರಾಷ್ಟ್ರಗಳಲ್ಲಿ ಈ ಸಂಶೋಧನೆ ನಡೆಸಲಾಗಿದ್ದು, ವಾರ್ಷಿಕ 2.8 ಮಿಲಿಯನ್ ಸಾವುಗಳು ಕಡಿತದಿಂದ ಸಂಭವಿಸುತ್ತೆ ಎಂಬ ಅಂಶ ತಿಳಿದುಬಂದಿದೆ.
ಕುಡಿತಕ್ಕೆ ಯಾವುದೇ ರೀತಿಯ ಸುರಕ್ಷತೆ ಅನ್ನೋದಿಲ್ಲ ಎನ್ನುವುದು ವಾಷಿಂಗ್ಟನ್ ಹೆಲ್ತ್ ಮೆಟ್ರಿಕ್ಸ್ ಹಾಗೂ ಎವಾಲ್ಯುಷೆನ್ ಸಂಸ್ಥೆಯ ಸಂಶೋಧಕ ಮ್ಯಾಕ್ಸ್ ಗ್ರಿಸ್ ವೋಲ್ಡ್. ಸ್ವಲ್ಪ ಕುಡಿತದ ಅಭ್ಯಾಸ ಸಹ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣ ಆಗುತ್ತೆ ಎನ್ನುತ್ತದೆ ಸಂಶೋಧನೆ. ಈ ಸಂಶೋಧನಾ ಲೇಖನ ‘ದಿ ಲನ್ಸೆಂಟ್ ‘ನಲ್ಲಿ ಪ್ರಕಟವಾಗಿದೆ.
10ಗ್ರಾಂ ಆಲ್ಕೋಹಾಲ್ ಅಂದ್ರೆ ಒಂದು ಸಣ್ಣ ಬಿಯರ್ ಕ್ಯಾನ್ , ಒಂದು ಗ್ಲಾಸ್ ವೈನ್ ಅಥವಾ ಸ್ಪಿರಿಟ್ ಗೆ ಸಮ. ಮದ್ಯ ವ್ಯಸನ ಕ್ರೀಯಾಶೀಲತೆಯನ್ನು ಸಹ ಕಡಿಮೆ ಮಾಡುತ್ತದೆ.
2016ರಲ್ಲಿ ಅಕಾಲಿಕ ಮರಣ ಮತ್ತು ಕಾಯಿಲೆಗೆ ಕಾರಣವಾಗೋ ಅಂಶಗಳಲ್ಲಿ ಮದ್ಯಪಾನ 7ನೇ ಸ್ಥಾನ ಪಡೆದಿದೆ.