ಕೆಂಡಸಂಪಿಗೆ ಚೆಲುವೆ ಮಾನ್ವಿತ ಹರೀಶ್ ಲಂಡನ್ ಬಿಬಿಸಿ ರೇಡಿಯೋಗೆ ಸಂದರ್ಶನ ನೀಡಿದ ಮೊದಲ ಕನ್ನಡದ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕೆಂಡಸಂಪಿ, ಟಗರು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿರುವ ಮಾನ್ವಿತಾ ನಾಗತಿಹಳ್ಳಿ ಚಿತ್ರತಂಡದೊಂದಿಗೆ ಲಂಡನ್ ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ.
ಹಿಂದೆ ಮಂಗಳೂರಲ್ಲಿ ರೇಡಿಯೋ ಮಿರ್ಚಿ 98.3 ನಲ್ಲಿ ಮಾನ್ವಿತಾ ಕಿಲಾಡಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.