ನಿರ್ದೇಶಕ ಎಸ್. ನಾರಾಯಣ್ 70ಕೋಟಿ ರೂಗಾಗಿ 20ಲಕ್ಷ ವಂಚನೆಗೆ ಒಳಗಾಗಿದ್ದಾರೆ.
ಕಡಿಮೆ ಬಡ್ಡಿಗೆ 70 ಕೋಟಿ ಸಾಲ ನೀಡುವುದಾಗಿ ಹೇಳಿದ್ದ ತಮಿಳುನಾಡು ಮೂಲದ ಜ್ಯೋತಿಷಿ ಮಂದಾರ ಮೂರ್ತಿಯಿಂದ ನಾರಾಯಣ್ ಮೋಸ ಹೋಗಿದ್ದಾರೆ.
ಮಂದಾರ ಮೂರ್ತಿ ಸಾಲಕ್ಕಾಗಿ 20ಲಕ್ಷ ರೂ ನಿರ್ವಹಣಾ ಶುಲ್ಕ ಪಡೆದಿದ್ದು, ಇದೀಗ ಸಾಲವನ್ನೂ ನೀಡದೆ ನಿರ್ವಹಣಾ ಶುಲ್ಕವನ್ನು ಸಹ ಕೊಡದೆ ನಾಪತ್ತೆಯಾಗಿದ್ದು, ನಾರಾಯಣ್ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.