ಜೈನ ಮುನಿ ತರುಣ್ ಸಾಗರ್ ಅವರು ಇನ್ನು ನೆನಪು ಮಾತ್ರ. ಅವರು ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ನವದೆಹಲಿಯ ಕೃಷ್ಣ ನಗರದ ರಾಧಾಪುರಿ ಜೈನ ಆಶ್ರಮದಲ್ಲಿ ವಿಧಿವಶರಾಗಿದ್ದಾರೆ. ಇವರಿಗೆ 51ವರ್ಷ ವಯಸ್ಸಾಗಿತ್ತು. ಜಾಂಡೀಸ್ ಮತ್ತು ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಕಂಡುಬಂದಿದ್ದರೂ ಕಳೆದ ಎರಡು ದಿನಗಳಿಂದ ಔಷಧವನ್ನೂ ಸೇವಿಸಿರಲಿಲ್ಲ.
ಕಳೆದ ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ತಮ್ಮನ್ನು ಜೈನ ಮಂದಿರಕ್ಕೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿ, ಜೈನ ಮಂದಿರಕ್ಕೆ ಬಂದು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. 1967 ಜೂನ್ 26ರಂದು ಮಧ್ಯಪ್ರದೇಶದ ದಾಹೋಹ್ ಜಿಲ್ಲೆಯಲ್ಲಿ ಹುಟ್ಟಿದ ಇವರು, 1981ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು