ಬಂಡೆಯನ್ನೇ ಕೊರೆದು ಮನೆ ನಿರ್ಮಿಸಿದ ಸಾಹಸಿ..! ಸದಾ ಕಾಲಕ್ಕೂ ಸಲ್ಲುವ ಕಾಡಿನ ಮನೆಯಿದು..!

Date:

ಮನೆ ಕಟ್ಟಲು ಮುಂದಾದರೆ ಇಟ್ಟಿಗೆ, ಮರಳು, ಸಿಮೆಂಟ್, ಕಬ್ಬಿಣ ಬೇಕೇ ಬೇಕು. ಇವುಗಳನ್ನೆಲ್ಲಾ ಹೊಂದಿಸಿ ಕೆಲಸಗಾರರನ್ನು ಹಿಡಿದು ಅವರಿಂದ ಮನೆ ಕಟ್ಟಿಸಿಕೊಳ್ಳುವಷ್ಟರಲ್ಲಿ ಹೈರಾಣಾಗುತ್ತೇವೆ. ಮನೆ ಕಟ್ಟಿದ ಮೇಲೂ ಹತ್ತಾರು ಕೆಲಸಗಳು ಇರುತ್ತವೆ. ಇಷ್ಟೆಲ್ಲಾ ಮಾಡಿದ ಮೇಲೆ ಆ ಮನೆ ಎಷ್ಟು ವರ್ಷ ಬಾಳಿಕೆ ಬರುತ್ತದೋ ಏನೋ ಎಂಬ ಚಿಂತೆ. ಏಕೆಂದರೆ ಕಟ್ಟಿದ ಕೆಲವೇ ದಿನಕ್ಕೆ ಮನೆ ಬಿರುಕು ಬಿಡಲೂಬಹುದು. ಆದ್ದರಿಂದ ಇಲ್ಲೋರ್ವ ವ್ಯಕ್ತಿ ಅದೆಲ್ಲದರ ಸಹವಾಸವೇ ಬೇಡ ಎಂದು ಬಂಡೆಯಲ್ಲೇ ಮನೆ ನಿರ್ಮಿಸಿದ್ದಾನೆ.
ಇಂಗ್ಲೆಂಡ್ ನ ಏಂಜೆಲೋ ಮಾಸ್ಟ್ರೊಪೆಟ್ರೊ ಎಂಬಾತ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಕೆಲವು ವರ್ಷಗಳ ಹಿಂದೆ ಪಾಶ್ರ್ವವಾಯು ಪೀಡಿತರಾಗಿ ಖಿನ್ನತೆಗೆ ಒಳಗಾಗಿದ್ದರು. ಆದ್ದರಿಂದ ಆಧುನಿಕ ಜೀವನ ಶೈಲಿಯಿಂದ ಬೇಸತ್ತು ಕಾಡಿನಲ್ಲಿ ವಾಸ ಮಾಡಲು ತೀರ್ಮಾನಿಸಿದರು. ಆದರೆ ಮನೆ ನಿರ್ಮಿಸಲೇಬೇಕಾದ ಅನಿವಾರ್ಯತೆ ಎದುರಾಯಿತು. ಆದ್ದರಿಂದ ಇಂಗ್ಲೆಂಡ್ ನ ವೈರ್ ಎಂಬ ಪ್ರದೇಶದಲ್ಲಿ ಕಾಡಿನ ಗುಹೆಯೊಂದರಲ್ಲಿ ವಾಸ ಮಾಡಲು ನಿರ್ಧರಿಸಿ ಅಲ್ಲೇ ಮನೆ ಮಾಡಿಕೊಂಡಿದ್ದಾರೆ. ಎಲ್ಲಾ ಅತ್ಯಾಧುನಿಕ ಸೌಲಭ್ಯಗಳಿರುವಂತೆ ಮನೆಯನ್ನು ವಿನ್ಯಾಸಗೊಳಿಸಲಾಗಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ.
ಈ ಮನೆ ನಿರ್ಮಿಸಲು ಏಂಜೆಲೋ ಮಾಸ್ಟ್ರೊಪೆಟ್ರೊ ಮಾತ್ರ ಕೆಲಸ ಮಾಡಿದ್ದಾರೆ. ಅದರಲ್ಲೂ 70ರಿಂದ 80 ಟನ್ ಭಾರದ ಬಂಡೆಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಹೊರಗೆ ಸಾಗಿಸಲಾಗಿದೆ.
ಸುಮಾರು 41 ದಿನಗಳ ಕಾಲ ಬಂಡೆ ಕೊರೆದು ತಮಗೆ ಬೇಕಾದಂತೆ ಮನೆ ರೂಪಿಸಿಕೊಂಡಿದ್ದು, ವೈಫೈ, ಉದ್ಯಾನವನ, ಸದಾ ಕಾಲ ನೀರು, ಬಾಗಿಲು, ಕಿಟಕಿ, ಬೆಡ್ ರೂಂ ಹೀಗೆ ಅತ್ಯಾಧುನಿಕ ಸೌಲಭ್ಯಗಳನ್ನು ಈ ಮನೆ ಒಳಗೊಂಡಿದೆ. ಆಧುನಿಕ ಜೀವನಶೈಲಿಯಿಂದ ದೂರವಾಗಲು ಹೋಗಿ ಕಾಡಿನಲ್ಲೇ ಸಕಲ ಸೌಲಭ್ಯ ಅಳವಡಿಸಿಕೊಂಡಿದ್ದು, ಬಂಡೆಯ ಮನೆ ನೋಡುಗರನ್ನು ಸೆಳೆಯುವಂತಿದೆ.

  • ರಾಜಶೇಖರ ಜೆ.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಭಪ್ಪರೆ ಬಾಸ್..! ತಲೆ ನೋವಿಗೆ ವಯಾಗ್ರಾ ಮಾತ್ರೆ ಕೊಟ್ನಂತೆ..! ಬಾಸ್ ಹುಚ್ಚಾಟಕ್ಕೆ ಕೆರಳಿ ಕಂಪ್ಲೇಂಟ್ ಕೊಟ್ಟ ಹೆಣ್ಣು..!

ಐಎಎಸ್ ಅಧಿಕಾರಿ ಏಕೆ ಕೆಲಸ ಬಿಟ್ಟರು ಗೊತ್ತಾ..? ಐಎಎಸ್ ಕೆಲಸ ಬಿಡುವಂತೆ ಮಾಡಿದ ಕೆಲಸ ಯಾವುದು..?

ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?

ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!

ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...