ತಾಯಿ ತನ್ನ 7 ತಿಂಗಳ ಮಗುವನ್ನು ಕೊಂದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಆರ್ಥಿಕ ಸಮಸ್ಯೆಗೆ ಹೆದರಿ ತಾಯಿ ಮಗುವನ್ನು ಕೊಂದು ಸಹಜ ಸಾವು ಎಂದು ಸಾಬೀತು ಪಡಿಸಲು ಮುಂದಾಗಿದ್ದಳೆಂದು ತಿಳಿದುಬಂದಿದೆ.
ಆದಿಬಾ ಆರೋಪಿ. ಆದಿಬಾ ಮತ್ತು ಆಕೆಯ ಪತಿ ಇಸ್ರೇಲ್ ಖಾನ್ ಮಲ್ಚಾಂಡ್ ಆಸ್ಪತ್ರೆಗೆ ಮೃತ ಮಗುವನ್ನು ತರುತ್ತಾರೆ. ಮಗು ಬಕೆಟ್ ನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಹೇಳುತ್ತಾರೆ. ಮಗುವಿನ ಕುತ್ತಿಗೆ ಭಾಗದಲ್ಲಿ ಅನುಮಾನಾಸ್ಪದ ಗುರುತುಗಳು ಕಂಡುಬಂದಿದ್ದರಿಂದ ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಏಮ್ಸ್ ಗೆ ಕಳುಹಿಸಲಾಗಿತ್ತು.
ಮಗುವಿನ ಕುತ್ತಿಗೆ ಭಾಗಕ್ಕೆ ಮಾರಣಾಂತಿಕ ಒತ್ತಡ ಉಂಟಾಗಿದೆ.ನೀರು ತುಂಬಿ ಸತ್ತಿಲ್ಲ ಎಂದು ವರದಿಯಿಂದ ತಿಳಿದುಬಂದಿತ್ತು. ಪೊಲೀಸರು ತನಿಖೆ ನಡೆಸಿದ ತಾಯಿಯೇ ತನ್ನ ಪತಿ ಇಲ್ಲದೇ ಇರುವಾಗ ಮಗುವನ್ನು ಕೊಂದಿರೋದು ಬೆಳಕಿಗೆ ಬಂದಿದೆ. ಆದಿಬಾ ತಾನೇ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾಳೆ. ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಸಾಕಷ್ಟು ಖರ್ಚು ಮಾಡಲಾಗಿತ್ತು. ಆರ್ಥಿಕ ಸಮಸ್ಯೆಯಿಂದ ಮಗುವನ್ನು ಕೊಂದಿರುವುದಾಗಿ ಹೇಳಿದ್ದಾಳೆ.