ತಲೆ ಕೂದಲು ಉದುರುತ್ತಿದೆ ಎಂದು 18 ವರ್ಷದ ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಕೊಡಗು ಮೂಲದ ನೇಹಾ ಗಂಗಮ್ಮ ಎಂಬಾಕೆ ಕೂದಲಿನ ಮೇಲಿನ ಪ್ರೀತಿಯಿಂದ ಸಾವಿಗೆ ಶರಣಾದವರು.
ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈಕೆ ನಾಲ್ಕು ದಿನಗಳ ಹಿಂದೆ ಮನೆಗೆ ಹೋಗುವುದಾಗಿ ಹೇಳಿ ಪಿಜಿಯಿಂದ ಹೊರಟಿದ್ದಾರೆ. ಆದರೆ,ಮನೆಗೆ ಹೋಗುವ ಬದಲು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಇವರ ಮೃತದೇಹ ಪತ್ತೆಯಾಗಿದೆ.
ನೇಹಾ ತಿಂಗಳ ಹಿಂದೆ ವಿ. ವಿ ಮೊಹಲ್ಲಾದ ರೋಹಿಣಿ ಬ್ಯೂಟಿಪಾರ್ಲರ್ ಎಂಬಲ್ಲಿ ಸ್ಟ್ರೈಟ್ನಿಂಗ್ ಮಾಡಿಸಿದ್ದಾಳೆ. ಬಳಿಕ ಕೂದಲು ಉದುರಲಾರಂಭಿಸಿದೆ. ಬ್ಯೂಟಿ ಪಾರ್ಲರ್ ಮಾಲೀಕರೊಂದಿಗೆ ಮಾತಾಡಿದ್ದಾಳೆ. ಕೂದಲು ಉದುರುವಿಕೆ ಕಡಿಮೆ ಆಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಲಕ್ಷ್ಮಣ ತೀರ್ಥ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.