ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿರುವ ಯುವ ವೇಗಿ ಖಲೀಲ್ ನನ್ನ ಯಶಸ್ಸಿಗೆ ಗುರು ರಾಹುಲ್ ದ್ರಾವಿಡ್ ಕಾರಣ ಎಂದು ಹೇಳಿಕೊಂಡಿದ್ದಾರೆ.
ಏಷ್ಯಾಕಪ್ ಗೆ ಆಯ್ಕೆಯಾಗಿರುವ ಸುದ್ದಿ ಕೇಳಿ ಸಂತೋಷ ಉಂಟಾಯಿತು. ಇದಕ್ಕಾಗಿ ನಾನು ದ್ರಾವಿಡ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅವರು ನನ್ನ ಕ್ರಿಕೆಟ್ ಜೀವನದ ಪ್ರಮುಖ ಮಾರ್ಗದರ್ಶಕರು ಎಂದು ಹೇಳಿಕೊಂಡಿದ್ದಾರೆ.
ಎಲ್ಲಾ ಯುವ ಆಟಗಾರರಂತೆ ಟೀಂ ಇಂಡಿಯಾದ ಭಾಗವಾಗಿ ಆಡುವುದು ನನ್ನ ಕನಸಾಗಿತ್ತು. ಇದೀಗ ಈ ಅವಕಾಶ ಸಿಕ್ಕಿರುವುದು ನನಗೆ ನಂಬಲು ಅಸಾಧ್ಯವಾಗಿದೆ.ತುಂಬಾ ಸಂತೋಷವಾಗಿದೆ. ನನ್ನನ್ನು ಒಬ್ಬ ಬೌಲರ್ ಆಗಿ ರೂಪಿಸಿದ ರಾಹುಲ್ ದ್ರಾವಿಡ್ ಅವರಿಗೆ ನನ್ನ ಧನ್ಯವಾದ ಎಂದಿದ್ದಾರೆ.
ಅದೇರೀತಿ ನಾನು ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಅನುಕರಿಸಿ ಬೌಲಿಂಗ್ ಮಾಡಲು ಕಲಿತಿದ್ದು, ಜಹೀರ್ ನನ್ನ ಹೀರೋ ಎಂದು ಖಲೀಲ್ ಹೇಳಿದ್ದಾರೆ.