12 ವರ್ಷದ ಬಾಲಕನೊಬ್ಬ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಉದಯಪುರ ಜಿಲ್ಲೆಯ ಜಾಡೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕ ಶನಿವಾರ ತನ್ನ ಪಕ್ಕದ ಮನೆಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಈತ ಮಧ್ಯಾಹ್ನ ಮನೆಯಿಂದ ಆಚೆ ಹೋಗಿದ್ದ. ಪೋಷಕರು ಮಕ್ಕಳೊಂದಿಗೆ ಆಟ ಆಡುತ್ತಿರಬಹುದು ಎಂದು ಭಾವಿಸಿದ್ದರು.
ಬಾಲಕಿ ಸಂಜೆ ಮನೆಗೆ ಬರುವಾಗ ಆಕೆಯ ಬಟ್ಟೆಯಲ್ಲಾ ರಕ್ತಮಯವಾಗಿತ್ತು. ಗುಪ್ತಾಂಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಆಕೆ ಅಳುತ್ತಾ ಬಂದಿದ್ದಾಳೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕನ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ.