ಹಿರಿಯ ನಟ ದೊಡ್ಡಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರಾವಣ ಕಡೆಯ ಸೋಮವರಾದ ಹಿನ್ನೆಲೆಯಲ್ಲಿ ರಾಯಚೂರಿನ ಸೂಗೂರೇಶ್ವರ ದೇವರ ದರ್ಶನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಇಡೀ ದಿನ ಸರತಿ ಸಾಲಲ್ಲಿನಿಂತು ದೇವರ ದರ್ಶನ ಪಡೆದಿದ್ದ ಅವರು ಬಳಲಿದ್ದರು ಎನ್ನಲಾಗಿದೆ.
ವಸತಿ ಗೃಹದ ಬಾತ್ ರೂಂ ನಲ್ಲಿ ಕುಸಿದು ಬಿದ್ದರು ಎಂದು ತಿಳಿದುಬಂದಿದ್ದು, ಆರ್ ಟಿಪಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.